
ಅಂಕೋಲಾ: ಉತ್ತರ ಕನ್ನಡದಲ್ಲಿನ ನೌಕಾನೆಲೆ ಐಎನ್‍ಎಸ್ ಕದಂಬ ಮತ್ತು ಶಸ್ತ್ರಾಗಾರ ವಲಯ ಐಎನ್‍ಎಸ್ ವಜ್ರಕೋಶ ವ್ಯಾಪ್ತಿಯನ್ನು `ನೋ ಫ್ಲೈಯಿಂಗ್ ಝೋನ್’ ಎಂದು ರಕ್ಷಣಾ ಇಲಾಖೆ ಆದೇಶ ಹೊರಡಿಸಿದೆ.
ಕಾರವಾರ ನೌಕಾನೆಲೆ ವ್ಯಾಪ್ತಿಯಲ್ಲಿರುವ 3 ಕಿ. ಮೀ. ಗಳಲ್ಲಿ ಯಾವುದೇ ರೀತಿಯ ಡ್ರೋಣ್, ಮಾನವ ರಹಿತ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿ ಈ ಆದೇಶ ಹೊರಡಿಸಲಾಗಿದೆ.
ಅನಧಿಕೃತವಾಗಿ ಅಥವಾ ನಿರ್ಬಂಧ ಹೇರಲಾದ ಪರಿಸರದಲ್ಲಿ ಅನಧಿಕೃತ ಡ್ರೋಣ್ ಹಾರಾಟ ಕಂಡು ಬಂದಲ್ಲಿ ಅದನ್ನು ಹೊಡೆದುರುಳಿಸಲಾಗುವುದು. ಜೊತೆಗೆ ಇಂತಹ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನೌಕಾನೆಲೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.