Slide
Slide
Slide
previous arrow
next arrow

ಅಂತರಾಜ್ಯ ಕಳ್ಳನನ್ನು ಬಂಧಿಸಿದ ಯಲ್ಲಾಪುರ ಪೋಲೀಸ್

300x250 AD

ಯಲ್ಲಾಪುರ: ಹಲವು ಕಳ್ಳತನಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಅಂತರಾಜ್ಯ ಕಳ್ಳನನ್ನು ಯಲ್ಲಾಪುರ ಪೋಲೀಸರು ಬಂಧಿಸಿದ್ದಾರೆ‌.
ಯಲ್ಲಾಪುರದ ಶಾರದಾಗಲ್ಲಿಯಲ್ಲಿ ನಡೆದ ಕಳ್ಳತನದ ತನಿಖೆ ನಡೆಸುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬಂಧಿತನನ್ನು
ಕಾರವಾರದ ಶಿರವಾಡದ ಅಶೋಕ ಬಂಡಿವಡ್ಡರ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಯಲ್ಲಾಪುರ, ಕಾರವಾರ, ಭಟ್ಕಳ, ಸಿದ್ದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ. ಅಲ್ಲದೇ ಶಿವಮೊಗ್ಗದ ಸೊರಬ, ಆನವಟ್ಟಿ ಧಾರವಾಡದ ಕಲಘಟಗಿ , ಹುಬ್ಬಳ್ಳಿ ಪ್ರದೇಶಗಳಲ್ಲಿ ಕಳ್ಳತನ ಮಾಡಿದ್ದ ಅಲ್ಲದೇ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲೂ ಕಳ್ಳತನ ಮಾಡಿ ಅಂತರಾಜ್ಯ ಕಳ್ಳನಾಗಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಕಳೆದ 3-4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳನನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1 ಬಂಗಾರದ ಬ್ರೇಸ್ಲೇಟ್ 55 ಗ್ರಾಂ ತೂಕದ 2 ಬಂಗಾರದ ಚೈನ್, 3 ಬಂಗಾರದ ಲಕ್ಷ್ಮೀ ಪದಕ ಸೇರಿ ಅಂದಾಜು ಎರಡುವರೆ ಲಕ್ಷ ಮೌಲ್ಯದ ವಸ್ತುಗಳನ್ನು ಹಾಗೂ 1 ಲಕ್ಷ ರೂಪಾಯಿ ಬೆಲೆಯ ಪಲ್ಸರ್ ಮೋಟಾರ ಸೈಕಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top