• Slide
    Slide
    Slide
    previous arrow
    next arrow
  • 100% ವಿದ್ಯುದೀಕರಣ ಪೂರ್ಣಗೊಳಿಸಿದ ಕೊಂಕಣ ರೈಲ್ವೆ; ಮೋದಿ ಶ್ಲಾಘನೆ

    300x250 AD

    ನವದೆಹಲಿ:  ಶೇಕಡಾ 100 ರಷ್ಟು ವಿದ್ಯುದೀಕರಣವನ್ನು ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೊಂಕಣ ರೈಲ್ವೇಯನ್ನು ಶ್ಲಾಘಿಸಿದ್ದಾರೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೊಸ ಮಾನದಂಡಗಳನ್ನು ಇದು ಸ್ಥಾಪಿಸಿದೆ ಎಂದು ಹೇಳಿದ್ದಾರೆ.

    ಮಹಾರಾಷ್ಟ್ರದ ರೋಹಾ ಮತ್ತು ಕರ್ನಾಟಕದ ಥೋಕೂರ್ ನಡುವಿನ ಸಂಪೂರ್ಣ 741 ಕಿಲೋಮೀಟರ್ ಮಾರ್ಗದಲ್ಲಿ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ಕಾರ್ಪೊರೇಷನ್ ಮಂಗಳವಾರ ತಿಳಿಸಿದೆ.

    ಟ್ವಿಟ್‌ ಮಾಡಿರುವ ಮೋದಿ, “ಮಿಷನ್ 100% ವಿದ್ಯುದೀಕರಣದ ಅಮೋಘ ಯಶಸ್ಸಿಗಾಗಿ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಹೊಂದಿಸಿದಕ್ಕಾಗಿ ಸಂಪೂರ್ಣ ಕೊಂಕಣ ರೈಲ್ವೆ ತಂಡಕ್ಕೆ ಅಭಿನಂದನೆಗಳು” ಎಂದಿದ್ದಾರೆ.

    300x250 AD

    ವಿದ್ಯುದೀಕರಣವು ಇಂಧನದ ಮೇಲೆ 150 ಕೋಟಿ ರೂಪಾಯಿಗಳ ಉಳಿತಾಯ ಮಾಡಲಿದೆ, ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ತಡೆರಹಿತ ಮತ್ತು ಮಾಲಿನ್ಯ-ಮುಕ್ತ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top