Slide
Slide
Slide
previous arrow
next arrow

ಗೆರಸೊಪ್ಪದಲ್ಲಿ ಬೃಹತ್ ಜಾಥ; ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಿದ ಅರಣ್ಯ ಇಲಾಖೆ

300x250 AD

ಹೊನ್ನಾವರ: ಅರಣ್ಯವಾಸಿಗಳನ್ನು ಉಳಿಸಿ ಜಾಥದ ಅಂಗವಾಗಿ ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಕಛೇರಿ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಬೃಹತ್ ಜಾಥ, ರ್ಯಾಲಿ, ಡಿಎಫ್‍ಓ ಆಗಮನಕ್ಕೆ ಒತ್ತಾಯ, ಧರಣಿ, ಬೇಡಿಕೆ ಮನ್ನಣೆಗೆ ಅರಣ್ಯಾಧಿಕಾರಿಗಳ ಸ್ಫಂದನೆ ಜರುಗಿಸಿದ್ದು ಇಂದಿನ ಅರಣ್ಯವಾಸಿಗಳನ್ನು ಉಳಿಸಿ ಜಾಥದ ವಿಶೇಷವಾಗಿತ್ತು.

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಗೇರಸೊಪ್ಪ ಸರ್ಕಲ್‍ದಿಂದ ಬೃಹತ್ ಅರಣ್ಯವಾಸಿಗಳು ಘೋಷಣೆ ಕೂಗುತ್ತಾ ರ್ಯಾಲಿ ಜರುಗಿಸಿ ನಂತರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು.

ಪ್ರಾರಂಭದಲ್ಲಿ ಅರಣ್ಯವಾಸಿಗಳು ಡಿಎಫ್‍ಓ ಅವರ ಆಗಮನಕ್ಕೆ ಅಗ್ರಹಿಸಿ ಒತ್ತಾಯಿಸಿ ಅರ್ಧತಾಸಿಗೂ ಹೆಚ್ಚು ವಲಯ ಅರಣ್ಯ ಕಛೇರಿಯ ಮುಂದೆ ಧರಣಿ ಪರಿಣಾಮವಾಗಿ ಡಿಎಫ್‍ಓ ಅವರು ಸ್ಥಳಕ್ಕೆ ಆಗಮಿಸಿ, ಅರಣ್ಯವಾಸಿಗಳ ಸಮಸ್ಯೆಗಳನ್ನ ಆಲಿಸಿದರು.

ಸಮಸ್ಯೆಗಳ ಸರಮಾಲೆ:

ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಕಿರುಕುಳ, ದೌರ್ಜನ್ಯ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದರೂ ಜಿಪಿಎಸ್ ಆಗದಿರುವುದು, ಜಿಪಿಎಸ್ ಪ್ರಮಾಣ ಕಡಿಮೆ ಆಗಿರುವುದು, ಜಿಪಿಎಸ್ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಹಸ್ತಕ್ಷೇಪ ಮಾಡುವುದು, ಅಭಯಾರಣ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸ್ಫಂದಿಸದಿರುವುದು, ವಾಸ್ತವ್ಯ ಇಮಾರತ್ತು ಪುನರ್ ನಿರ್ಮಾಣಕ್ಕೆ ಆತಂಕ ಉಂಟುಮಾಡುವುದು, ಮುಂತಾದ ಸಮಸ್ಯೆಗಳ ಸರಮಾಲೆ ಅರಣ್ಯವಾಸಿಗಳಿಂದ ಏಕಾಎಕಿಯಾಗಿ ಅರಣ್ಯ ಅಧಿಕಾರಿಗಳ ಮುಂದೆ ಮಂಡಿಸಲಾಯಿತು.

ಅರಣ್ಯಾಧಿಕಾರಿಗಳಿಂದ ಸೂಕ್ತ ಸ್ಫಂದನೆ:

300x250 AD

ಸದ್ರಿ ಹೋರಾಟದ ಸಭೆಯಲ್ಲಿ ಸಮಸ್ಯೆಗಳನ್ನ ಆಲಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಅವರು ಅರಣ್ಯವಾಸಿಗಳ ಸಮಸ್ಯೆ ಕಾನೂನು ದೃಷ್ಟಿಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ, ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಸ್ಫಂದನೆಗೆ ಮಾನವಿಯತೆಯೂ ಮುಖ್ಯ, ಅರಣ್ಯವಾಸಿಗಳಿಗೆ ದೌರ್ಜನ್ಯವಾಗದ ರೀತಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ನಿರ್ಧೇಶನ ನೀಡಲಾಗುತ್ತಿದ್ದು, ಅರಣ್ಯವಾಸಿಗಳ ಜಿಪಿಎಸ್ ಮಂಜೂರಿ ಪ್ರಕ್ರೀಯೆಯಲ್ಲಿ ಅರಣ್ಯವಾಸಿಗಳ ಪರವಾಗಿ ಕಾರ್ಯ ನಿರ್ವಹಿಸಲಾಗುವುದು, ಭಯ ಮತ್ತು ಆತಂಕ ಉಂಟಾಗದ ರೀತಿಯಲ್ಲಿ ಅರಣ್ಯವಾಸಿಗಳಿಗೆ ವಾತಾವರಣ ನಿರ್ಮಿಸಲಾಗುವುದು, ಅರಣ್ಯವಾಸಿಗಳು ಇಲ್ಲದೇ ಕಾಡನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಮಸ್ಯೆಗಳ ಸರಮಾಲೆ ; ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ.

ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಕೊಡುವ ಅರಣ್ಯ ಸಿಬ್ಬಂದಿಗಳ ಮೇಲೆ ಅತೀಕ್ರಮಣದಾರರು ತೀವ್ರ ತರದ ಆಕ್ರೋಶವನ್ನು ಡಿಎಫ್‍ಓ ಅವರ ಸಮಕ್ಷಮ ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಎಸಿಎಫ್ ಸುದರ್ಶನ ಆರ್‍ಎಫ್‍ಓ ಪ್ರೀತಿ ನಾಯ್ಕ, ಸಿಪಿಐ ಶ್ರೀಧರ ಎಸ್ ಆರ್, ಪಿಎಸ್‍ಐ ಆನಂದ ಮೂರ್ತಿ, ಹೋರಾಟ ಸಂಘಟನೆಯ ಜಿಲ್ಲಾ ಸಂಚಾಲಕ ರಾಮು ಮರಾಠಿ, ತಾಲೂಕ ಸಂಚಾಲಕ ವಿನೋಧ ನಾಯ್ಕ ಯಲಕೊಟಗಿ, ಮಂಜು ಮರಾಠಿ, ಸಂಕೇತ ಯಲಕೊಟಗಿ, ಆರ್ ಹೆಚ್ ನಾಯ್ಕ ಚಿಕ್ಕೊಳ್ಳಿ, ಅನಂತ ನಾಯ್ಕ ಗೇರಸೊಪ್ಪ, ಪಿಟಿ ನಾಯ್ಕ ಮೂಡ್ಕಣಿ, ಸುರೇಶ ಮೇಸ್ತ ಹೋನ್ನಾವರ, ಗೀತಾ ಹೋನ್ನಾವರ, ಗಾಯತ್ರಿ ಹೋನ್ನಾವರ, ಫಕ್ರುದ್ದೀನ್ ಸಾಬ ನಗರಬಸ್ತಿಕೇರಿ, ರಾಘವೇಂದ್ರ ನಾಯ್ಕ ಮುಂತಾದವರು ನೇತ್ರತ್ವ ವಹಿಸಿದ್ದರು.

Share This
300x250 AD
300x250 AD
300x250 AD
Back to top