• Slide
    Slide
    Slide
    previous arrow
    next arrow
  • ಇನ್ಮುಂದೆ ಹಣದ ವಂಚನೆಗೆ ಬೀಳಲಿದೆ ಬ್ರೇಕ್;ರಾಜ್ಯದಲ್ಲಿ FSL ಪ್ರಯೋಗಾಲಯ ಸ್ಥಾಪನೆ

    300x250 AD

    ಹುಬ್ಬಳ್ಳಿ: ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲ ( FSL Lab ) ವನ್ನು ಆರಂಭಿಸುವ ಮೂಲಕ ವಂಚಕರಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ಬಂದ ಕೂಡಲೇ ಅದು ಫ್ರಾಡ್ ಎಂದು ಗೊತ್ತಾಗುತ್ತಿದ್ದಂತೆಯೇ 112 ಗೆ ಕರೆ ಮಾಡಿದರೆ ಒಂದು ಸಂಖ್ಯೆ ಜನರೇಟ್ ಆಗುತ್ತದೆ. ಅಪರಾಧ ಎಸಗಿರುವವರ ಖಾತೆ ಮತ್ತು ಹಣ ಕಳೆದುಕೊಂಡಿರುವವರ ಖಾತೆಯ ಮಾಹಿತಿಯಿಂದ 20 ನಿಮಿಷಗಳೊಳಗೆ ಖಾತೆ ಬ್ಲಾಕ್ ಮಾಡಿ ಹಣ ಹಿಂದಿರುಗಿ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಇನ್ಮುಂದೆ ಸೈಬರ್ ವಂಚಕರು ನಿಮ್ಮ ಖಾತೆಗೆ ಕನ್ನ ಹಾಕಿದ್ರೇ, 20 ನಿಮಿಷಗಳಲ್ಲಿ ಆ ಹಣ ನಿಮ್ಮ ಖಾತೆಗೆ ಮರಳಿ ಬರಲಿದೆ.

    ಭಾನುವಾರ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

    ಈ ಬಳಿಕ ಮಾತನಾಡಿದ ಅವರು, ಡಿಎನ್‍ಎ, ಸೈಬರ್, ಮೊಬೈಲ್, ದಾಖಲೀಕರಣ ಹಾಗೂ ಆಡಿಯೋ ವೀಡಿಯೋ ವಿಭಾಗಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಮಾದಕವಸ್ತುಗಳ ವಿಭಾಗವನ್ನು ಪ್ರಾರಂಭಿಸುವ ಅಗತ್ಯವಿದೆ. ಈಗಾಗಲೇ 80 ಮಂದಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಪಡೆದ ನಂತರ ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಇವರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ ಎಂದರು.

    ಅಪರಾಧಗಳನ್ನು ನಿಯಂತ್ರಿಸಲು ಕಾನೂನು ಸದಾ ಅಪರಾಧಕ್ಕಿಂತಲೂ ಮುಂಚತವಾಗಿಯೇ ರೂಪುಗೊಳ್ಳಬೇಕು. ಅದಕ್ಕಾಗಿ ವಿಜ್ಞಾನ, ತರಬೇತಿ, ಇಂದೀಕರಣ ಎಲ್ಲವೂ ನಿರಂತರವಾಗಿ ನಡೆಯಬೇಕು. ಮಾದಕವಸ್ತುಗಳ ನಿಯಂತ್ರಣಕ್ಕಾಗಿ ನಮ್ಮ ರಾಜ್ಯ ಪೋಲೀಸರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ವಶ ಪಡಿಸಿಕೊಂಡಷ್ಟು ಮಾದಕ ವಸ್ತುವನ್ನು ಒಂದು ವರ್ಷದಲ್ಲಿ ಕರ್ನಾಟದಲ್ಲಿ ವಶಪಡಿಸಿಕೊಳ್ಳಲಾಯಿತು. ಸರ್ಕಾರ ಅದನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಅತಿ ಹೆಚ್ಚು ಮುಟ್ಟುಗೋಲು ಹಾಕಿಕೊಂಡಿದ್ದು, ಹೆಚ್ಚಿನ ಪ್ರಕರಣಗಳು ಹಾಗೂ ಬಂಧನಗಳನ್ನು ಕರ್ನಾಟಕ ಪೋಲೀಸರು ಮಾಡಿದ್ದಾರೆ ಎಂದು ತಿಳಿಸಿದರು.

    ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಕ್ರಮ ಜಾರಿ

    ಬದ್ಧತೆಯಿದ್ದರೆ, ವಾಸ್ತವ ರೂಪಕ್ಕೆ ಯೋಜನೆಗಳು ಬರುತ್ತವೆ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಎಫ್.ಎಸ್.ಎಲ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಈ ಬಾರಿ ಅದು ಅಸ್ತಿತ್ವಕ್ಕೆ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಎಫ್.ಎಸ್.ಎಲ್ ಪ್ರಯೋಗಾಲಯಗಳು ಅಪರಾಧ ಪತ್ತೆ ಹಚ್ಚಲು ಮಹತ್ವದ ಪಾತ್ರ ನಿರ್ವಹಿಸುತ್ತವೆ. ನ್ಯಾಯಾಲಯಗಳಲ್ಲಿ ಸಾಕ್ಷ್ಯಾಧಾರಗಳಿಗೆ ವೈಜ್ಞಾನಿಕ ಪುರಾವೆಗಳು ಎಫ್‍ಎಸ್‍ಎಲ್ ಪ್ರಯೋಗಾಲಯಗಳು ಒದಗಿಸುತ್ತವೆ. ಇಂಥ ಪ್ರಯೋಗಾ¯ಯ ಕೇವಲ ಬೆಂಗಳೂರಿನಲ್ಲಿ ಮಾತ್ರವಿತ್ತು. ಡಿಎನ್‍ಎ ಮತ್ತು ಸೈಬರ್ ಅಪರಾಧಗಳ ಪತ್ತೆಯ ವರದಿಗಳು 2-3 ತಿಂಗಳಲ್ಲಿ ಲಭ್ಯವಾಗುತ್ತಿವೆ ಎಂದರು.

    300x250 AD

    ಸೈಬರ್ ಅಪರಾಧಗಳು ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಾಗುತ್ತಿವೆ. ಅದಕ್ಕೂ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗಿದೆ. ಸೈಬರ್ ಅಪರಾಧಗಳನ್ನು ತಡೆಯಲು ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ಬಂದ ಕೂಡಲೇ ಅದು ಫ್ರಾಡ್ ಎಂದು ಗೊತ್ತಾಗುತ್ತಿದ್ದಂತೆಯೇ 112 ಗೆ ಕರೆ ಮಾಡಿದರೆ ಒಂದು ಸಂಖ್ಯೆ ಜನರೇಟ್ ಆಗುತ್ತದೆ. ಅಪರಾಧ ಎಸಗಿರುವವರ ಖಾತೆ ಮತ್ತು ಹಣ ಕಳೆದುಕೊಂಡಿರುವವ ಖಾತೆಯ ಮಾಹಿತಿಯಿಂದ 20 ನಿಮಿಷಗಳೊಳಗೆ ಖಾತೆ ಬ್ಲಾಕ್ ಮಾಡಿ ಹಣ ಹಿಂದಿರುಗಿ ಪಡೆಯಲು ಸಾಧ್ಯವಾಗಿದೆ. ಇದು ಕರ್ನಾಟಕದಿಂದಲೇ ಪ್ರಾರಂಭವಾಗಿರುವುದು ಹೆಮ್ಮೆಯ ಸಂಗತಿ ಎಂದರು.

    ಉತ್ತರ ಕರ್ನಾಟಕದ ಅತ್ಯಾಧುನಿಕ ಕೇಂದ್ರವಾಗಬೇಕು

    ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯವು ಉತ್ತರ ಕರ್ನಾಟಕದ ಅತ್ಯಾಧುನಿಕ ಪ್ರಾದೇಶಿಕ ಕೇಂದ್ರವಾಗಬೇಕು. ಆಧುನಿಕ ಕಟ್ಟಡವಾದರೆ ಸಾಲದು, ಆಧುನಿಕ ಉಪಕರಣ, ತರಬೇತಿ ಹೊಂದಿದ ಸಿಬ್ಬಂದಿ, ಟಿಲಿಮೆಡಿಸಿನ್ ಮತ್ತು ಮ್ಯಾಪಿಂಗ್ ನಿಂದ 2-3 ಜಿಲ್ಲೆಗಳಿಗೆ ಹೃದ್ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ನೀಡಲು ಈಗಾಗಲೇ ಆದೇಶ ನೀಡಲಾಗಿದೆ ಎಂದರು.

    ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್ ನಲ್ಲಿ ಹೇಳಿರುವುದನ್ನು ನಿಗದಿತ ಸಮಯದಲ್ಲಿ ಕಾರ್ಯಗತವಾಗಿ, ಬಡಜನರಿಗೆ, ಯುವಕರಿಗೆ, ಶಿಕ್ಷಣದಿಂದ ವಂಚಿತರಾದವರಿಗೆ ಸೌಲಭ್ಯ ದೊರಕಿಸಲಾಗಿದೆ. ಧಾರವಾಡದಿಂದ ಬೆಳಗಾವಿ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಇದನ್ನು ಪ್ರಾರಂಭಿಸಲಾಗುವುದು. ಹುಬ್ಬಳ್ಳಿ, ಅಂಕೋಲಾ ರೈಲ್ವೆ ಮಾರ್ಗಕ್ಕೆ ಪರಿಸರದ ಅನುಮೋದನೆ ಪಡೆದು ಇದೇ ವರ್ಷ ಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೆರವಿನಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top