• Slide
    Slide
    Slide
    previous arrow
    next arrow
  • ವೇದಗಳು ಮನುಷ್ಯನಲ್ಲಿರುವ ಗೊಂದಲಗಳ ನಿವಾರಣೆಗೆ ಸ್ಪಷ್ಟತೆ ನೀಡುತ್ತವೆ; ಸಿಎಂ ಬೊಮ್ಮಾಯಿ

    300x250 AD

    ಬೆಂಗಳೂರು: ಮಾನವೀಯ ಗುಣ ಹಾಗೂ ಪಕ್ಷಪಾತವಿಲ್ಲದ, ನ್ಯಾಯನಿಷ್ಠುರತೆಯನ್ನು ಸನಾತನ ಧರ್ಮ ಬೋಧಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ನಿನ್ನೆ ಶ್ರೀ ಉತ್ತರಾಧಿಮಠದ ಜಯತೀರ್ಥ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ಧರ್ಮ ಉಳಿದರೆ ಮಾನವೀಯತೆ ಉಳಿಯುತ್ತದೆ. ವೇದಗಳಿಂದ ಸತ್ಯ ಹಾಗೂ ನ್ಯಾಯದ ಮಾರ್ಗ ಜನರಿಗೆ ಸಿಗುತ್ತದೆ. ವೇದಗಳ ಭಾವಾರ್ಥಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು. ಪ್ರತಿಯೊಬ್ಬ ಮನುಷ್ಯನಲ್ಲಿರುವ ಗೊಂದಲಗಳು ನಿವಾರಣೆಯಾಗಿ ಸ್ಪಷ್ಟತೆ ಮೂಡುತ್ತದೆ. ಆಧುನಿಕ ಜಗತ್ತಿನ ಸವಾಲುಗಳಿಗೆ ಉತ್ತರಿಸುವ ರೀತಿಯಲ್ಲಿ ವೇದಗಳ ಅರ್ಥವನ್ನು ಸರಳೀಕರಿಸಿ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

    300x250 AD

    ವೇದಾಧ್ಯಯನ ಮಾಡಿದಾಗ ಅದರ ಆಳ ಅರ್ಥವಾಗುತ್ತದೆ. ವೇದಗಳ ಬಗೆಗಿನ ಅರಿವು ಜ್ಞಾನಸಂಪಾದನೆಯ ಜೊತೆಗೆ ನಮ್ಮ ವ್ಯಕ್ತಿತ್ವ ಹಾಗೂ ಚಿಂತನೆಯಲ್ಲಿ ಬದಲಾವಣೆಯನ್ನು ತರುವುದಲ್ಲದೇ ಸಾರ್ಥಕತೆಯ ಬದುಕು ನಮ್ಮದಾಗಿಸುತ್ತದೆ. ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವದಲ್ಲಿ ವೇದಗಳನ್ನು ಭೋದಿಸುವವರ ಜ್ಞಾನ, ವೇದಗಳನ್ನು ಅರ್ಥ ಮಾಡಿಕೊಂಡ ಪರಿ, ಅವುಗಳ ಉಚ್ಛಾರಣೆಯ ಸಾಮರ್ಥ್ಯದ ಪರೀಕ್ಷೆಯಾಗುತ್ತದೆ. ವೇದ ಜ್ಞಾನದಿಂದ ಸನಾತನ ಧರ್ಮ ದೀರ್ಘಕಾಲ ಉಳಿದಿದೆ. ಭರತ ವರ್ಷದಲ್ಲಿ ಸನಾತನ ಧರ್ಮ ಸೂರ್ಯಚಂದ್ರರಿರುವ ವರೆಗೆ ಇರುತ್ತದೆ ಎಂದು ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top