• Slide
    Slide
    Slide
    previous arrow
    next arrow
  • ಭಾರತದಿಂದ ಅಫ್ಘಾನಿಸ್ಥಾನಕ್ಕೆ 50,000 ಟನ್ ಗೋಧಿ; ಮಾನವೀಯ ನೆರವಿನ ಕಾರ್ಯಕ್ಕೆ ಚಾಲನೆ

    300x250 AD

    ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಇಂದು ಪಂಜಾಬ್‌ನ ಅಟ್ಟಾರಿ-ವಾಘಾ ಗಡಿಯಲ್ಲಿ ಅಫ್ಘಾನಿಸ್ಥಾನಕ್ಕೆ 50,000 ಟನ್ ಗೋಧಿಯ ಮಾನವೀಯ ನೆರವನ್ನು ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜಲಾಲಾಬಾದ್‌ನ ಅಟ್ಟಾರಿ ಐಸಿಪಿಯಿಂದ ಪಾಕಿಸ್ತಾನದ ಮೂಲಕ ರವಾನೆ ಸಾಗಲಿದೆ.

    “ಮುಂದಿನ 2 ರಿಂದ 3 ತಿಂಗಳುಗಳಲ್ಲಿ ಅಫ್ಘಾನಿಸ್ಥಾನಕ್ಕೆ ಮಾನವೀಯ ನೆರವು ಪೂರೈಸಲು ಇಂತಹ ಹಲವು ರವಾನೆಗಳನ್ನು ಕಳುಹಿಸಲಾಗುವುದು” ಎಂದು ಶೃಂಗ್ಲಾ ಪ್ರತಿಪಾದಿಸಿದ್ದಾರೆ.

    “ನಾವು 50,000 ಟನ್ ಗೋಧಿಯ ರೂಪದಲ್ಲಿ ಅಫ್ಘಾನಿಸ್ತಾನಕ್ಕೆ ನಮ್ಮ ಮಾನವೀಯ ಸಹಾಯವನ್ನು ವಿಸ್ತರಿಸುತ್ತಿದ್ದೇವೆ” ಎಂದಿದ್ದಾರೆ.

    “ದೇಶವು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಭಾರತದಿಂದ ಗೋಧಿ ಸಾಗಿಸುವ 50 ಟ್ರಕ್‌ಗಳು ಅಫ್ಘಾನಿಸ್ತಾನಕ್ಕೆ ಹೋಗುತ್ತವೆ. ಭಾರತವು ಆಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ ಮತ್ತು ನಿಕಟ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ದೇಶಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ” ಎಂದಿದ್ದಾರೆ.

    300x250 AD

    ಈ ಗೋಧಿಯನ್ನು 23 ತಿಂಗಳುಗಳಲ್ಲಿ ಅಫ್ಘಾನಿಸ್ತಾನದಲ್ಲಿ ಹಂಚಲು ವಿಶ್ವ ಆಹಾರ ಕಾರ್ಯಕ್ರಮಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.

    “ಕಷ್ಟದ ಸಮಯದಲ್ಲಿ ಅಫ್ಘಾನಿಸ್ತಾನದ ಪರವಾಗಿ ನಿಂತಿದ್ದಕ್ಕಾಗಿ ನಾವು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಒಂದು ತಿಂಗಳಲ್ಲಿ 50,000 ಮೆಟ್ರಿಕ್ ಟನ್ ಗೋಧಿಯನ್ನು ದೇಶಕ್ಕೆ ತಲುಪಿಸಲಾಗುವುದು ಮತ್ತು ಆಹಾರದ ಕೊರತೆಯನ್ನು ಎದುರಿಸುತ್ತಿರುವ ಆಫ್ಘನ್ ಜನರಿಗೆ ವಿತರಿಸಲಾಗುವುದು” ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಮುಂಡ್ಜಾಯ್ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top