ಶಿರಸಿ: ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗಾ ಜಲಪಾತದಲ್ಲಿ ಮುಳುಗಿ ಶಿರಸಿಯ ಓರ್ವ ಯುವಕ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಪದವಿ ಮೊದಲ ವರ್ಷದಲ್ಲಿ ಓದುತ್ತಿದ್ದ ಯುವಕ ಎಂದು ತಿಳಿದುಬಂದಿದ್ದು, ಈತನ ಜೊತೆಗಿದ್ದ ಮತ್ತೀರ್ವರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ಪೋಲೀಸ್ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ವ್ಯಕ್ತಿಯ ಹುಡುಕಾಟ ನಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಶಿವಗಂಗಾ ಫಾಲ್ಸ್’ನಲ್ಲಿ ಬಿದ್ದು ಶಿರಸಿ ಯುವಕ ನಾಪತ್ತೆ; ಶೋಧ ಕಾರ್ಯ ಮುಂದುವರಿಕೆ
