• Slide
    Slide
    Slide
    previous arrow
    next arrow
  • ಭಾರತ-ಪಾಕ್ ಗಡಿಯಲ್ಲಿ‌ ವಿಶ್ವದ ಅತೀದೊಡ್ಡ ಖಾದಿ ತ್ರಿವರ್ಣ ಧ್ವಜ ಪ್ರದರ್ಶನ

    300x250 AD

    ನವದೆಹಲಿ: ಖಾದಿ ಬಟ್ಟೆಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜವನ್ನು ಜೈಸಲ್ಮೇರ್‌ನ ಭಾರತ-ಪಾಕಿಸ್ಥಾನ ಗಡಿಯಲ್ಲಿ ಶನಿವಾರ ಸೇನಾ ದಿನದಂದು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಎಂಎಸ್‌ಎಂಇ ಸಚಿವಾಲಯ ತಿಳಿಸಿದೆ.

    ಸಚಿವಾಲಯದ ಪ್ರಕಾರ, 1971 ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ಐತಿಹಾಸಿಕ ಯುದ್ಧದ ಕೇಂದ್ರ ವೇದಿಕೆಯಾಗಿದ್ದ ಲಾಂಗೆವಾಲಾದಲ್ಲಿ ಈ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗುತ್ತದೆ.

    ಸಚಿವಾಲಯದ ಪ್ರಕಾರ, 2ನೇ ಅಕ್ಟೋಬರ್ 2021 ರಂದು ಲೇಹ್‌ನಲ್ಲಿ ಅನಾವರಣಗೊಂಡ ನಂತರ ಈ ರಾಷ್ಟ್ರ ಧ್ವಜದ 5 ನೇ ಸಾರ್ವಜನಿಕ ಪ್ರದರ್ಶನ ಇದಾಗಲಿದೆ. ಇದನ್ನು  8 ನೇ ಅಕ್ಟೋಬರ್ 2021 ರಂದು ವಾಯುಪಡೆಯ ದಿನದ ಸಂದರ್ಭದಲ್ಲಿ ಹಿಂಡನ್ ಏರ್‌ಬೇಸ್‌ನಲ್ಲಿ ಪ್ರದರ್ಶಿಸಲಾಯಿತು. ಅಕ್ಟೋಬರ್ 21, 2021 ರಂದು ಕೆಂಪು ಕೋಟೆಯಲ್ಲಿ ಭಾರತ 100 ಕೋಟಿ ಕೋವಿಡ್ ವ್ಯಾಕ್ಸಿನೇಷನ್‌ಗಳನ್ನು ಪೂರ್ಣಗೊಳಿಸಿದ ಸಂದರ್ಭ ಪ್ರದರ್ಶಿಸಲಾಗಿದೆ.

    4ನೇ ಡಿಸೆಂಬರ್ 2021 ರಂದು, ನೌಕಾಪಡೆಯ ದಿನವನ್ನು ಆಚರಿಸಲು ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿಯ ನೇವಲ್ ಡಾಕ್‌ಯಾರ್ಡ್‌ನಲ್ಲಿ ಈ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಲಾಯಿತು.

    ಭಾರತೀಯತೆಯ ಸಾಮೂಹಿಕ ಮನೋಭಾವ ಮತ್ತು ಖಾದಿಯ ಪಾರಂಪರಿಕ ಕುಶಲಕರ್ಮಿಗಳ ಕರಕುಶಲತೆಯನ್ನು ಸಂಕೇತಿಸುವ ಈ ತ್ರಿವರ್ಣ ಧ್ವಜವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) 75 ವರ್ಷಗಳ ಸ್ವಾತಂತ್ರ್ಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುವ ನಿಟ್ಟಿನಲ್ಲಿ ಸಿದ್ಧಪಡಿಸಿದೆ.

    300x250 AD

    ಐತಿಹಾಸಿಕ ಸಂದರ್ಭಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಧ್ವಜವನ್ನು ಪ್ರದರ್ಶಿಸಲು KVIC ರಕ್ಷಣಾ ಪಡೆಗಳಿಗೆ ಇದನ್ನು ಹಸ್ತಾಂತರಿಸಿದೆ.

    ಈ ತ್ರಿವರ್ಣ ಧ್ವಜವು 225 ಅಡಿ ಉದ್ದ, 150 ಅಡಿ ಅಗಲ ಮತ್ತು  1400 ಕೆಜಿ ತೂಗುತ್ತದೆ. ಈ ಧ್ವಜವನ್ನು ಸಿದ್ಧಪಡಿಸಲು 70 ಖಾದಿ ಕುಶಲಕರ್ಮಿಗಳು 49 ದಿನಗಳನ್ನು ತೆಗೆದುಕೊಂಡಿದ್ದಾರೆ. ಈ ಧ್ವಜದ ತಯಾರಿಕೆಯು ಖಾದಿ ಕುಶಲಕರ್ಮಿಗಳು ಮತ್ತು ಸಂಬಂಧಿತ ಕೆಲಸಗಾರರಿಗೆ ಸುಮಾರು 3500 ಮಾನವ-ಗಂಟೆಗಳ ಹೆಚ್ಚುವರಿ ಕೆಲಸವನ್ನು ಸೃಷ್ಟಿಸಿತ್ತು.

    ಒಟ್ಟು 33,750 ಚದರ ಅಡಿ ವಿಸ್ತೀರ್ಣದ ಧ್ವಜವನ್ನು ತಯಾರಿಸಲು 4500 ಮೀಟರ್ ಕೈಯಿಂದ ನೂಲುವ, ಕೈಯಿಂದ ನೇಯ್ದ ಖಾದಿ ಹತ್ತಿ ಬಂಟಿಂಗ್ ಅನ್ನು ಬಳಸಲಾಗಿದೆ. ಧ್ವಜದಲ್ಲಿರುವ ಅಶೋಕ ಚಕ್ರವು 30 ಅಡಿ ವ್ಯಾಸವನ್ನು ಹೊಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top