• Slide
    Slide
    Slide
    previous arrow
    next arrow
  • ನೀರು ಶುದ್ಧೀಕರಣಕ್ಕಾಗಿ ಕೃತಕ ಬುದ್ಧಿಮತ್ತೆ‌ ಚಾಲಿತ ಸ್ಟಾರ್ಟ್ಅಪ್ ಸ್ಥಾಪನೆ

    300x250 AD

    ನವದೆಹಲಿ: ನವೀನ ತಂತ್ರಜ್ಞಾನದ ಮೂಲಕ ನೀರು ಶುದ್ಧೀಕರಣಕ್ಕಾಗಿ ಐಐಟಿ ಹಳೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ‌ ಚಾಲಿತ ಸ್ಟಾರ್ಟ್-ಅಪ್ ಅನ್ನು ಸ್ಥಾಪಿಸಿದ್ದು, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇದಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.

    ಈ ಸ್ಟಾರ್ಟ್ ಅಪ್ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ.

    ಸ್ಟಾರ್ಟ್ ಅಪ್ ‌ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ ಸ್ಟಾರ್ಟ್‌ಅಪ್ ಉಪಕ್ರಮವು ಇತರ ಸ್ಟಾರ್ಟ್‌ಅಪ್‌ಗಳಿಗೂ ಪ್ರೇರಣೆಯಾಗಬೇಕು ಎಂದರು.

    300x250 AD

    ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೌಶಲ್ಯ ಮತ್ತು ಪ್ರತಿಭೆ ಹೊಂದಿರುವ ಸಂಭಾವ್ಯ ಸಣ್ಣ ಮತ್ತು ಕಾರ್ಯಸಾಧ್ಯವಾದ ಸ್ಟಾರ್ಟ್-ಅಪ್‌ಗಳನ್ನು ತಲುಪಲು ಬದ್ಧವಾಗಿದೆ, ಆದರೆ ಸಂಪನ್ಮೂಲಗಳ ಕೊರತೆಯಿದೆ. ಶುದ್ಧ ಕುಡಿಯುವ ನೀರು ಇನ್ನೂ ತಲುಪದ ಸುಮಾರು 14 ಕೋಟಿ ಕುಟುಂಬಗಳನ್ನು ಒಳಗೊಳ್ಳಲು ತಾಂತ್ರಿಕ ಪರಿಹಾರಗಳೊಂದಿಗೆ ಮುಂದೆ ಬರುವಂತೆ ಅವರು ಖಾಸಗಿ ವಲಯಕ್ಕೆ ಮನವಿ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top