• Slide
    Slide
    Slide
    previous arrow
    next arrow
  • ಭಾರತ-ಕೊರಿಯಾ ಉಭಯ ಸಚಿವರ ಚರ್ಚೆ; 2030ರ ವೇಳೆಗೆ 50 ಬಿಲಿಯನ್ ಡಾಲರ್ ವ್ಯಾಪಾರ ಗುರಿ

    300x250 AD

    ನವದೆಹಲಿ: ದಕ್ಷಿಣ ಕೊರಿಯಾದ ವಾಣಿಜ್ಯ ಸಚಿವ ಯೋ ಹಾನ್-ಕೂ ಅವರು ನಿನ್ನೆ ದೆಹಲಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದಾರೆ. ಉಭಯ ಸಚಿವರು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಿತ ಅಂಶಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಉನ್ನತೀಕರಣದ ಮಾತುಕತೆಗಳ ಚರ್ಚೆಗಳಿಗೆ ಹೊಸ ವೇಗವನ್ನು ನೀಡಲು ಉಭಯ ಸಚಿವರು ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ಕೊರಿಯಾ 2030 ರ ಮೊದಲು 50 ಬಿಲಿಯನ್ ಡಾಲರ್ ವ್ಯಾಪಾರ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿವೆ.

    ಎರಡೂ ಕಡೆಯಿಂದ ಉದ್ಯಮವು ವ್ಯಕ್ತಪಡಿಸಿದ ತೊಂದರೆಗಳನ್ನು ಪರಿಹರಿಸಲು ಮುಕ್ತ ಮನೋಭಾವವನ್ನು ಇಬ್ಬರು ಮಂತ್ರಿಗಳು ಒಪ್ಪಿಕೊಂಡರು ಮತ್ತು ಅಇPಂ ಉನ್ನತ-ದರ್ಜೆಯ ಮಾತುಕತೆಗಳನ್ನು ಸಾಧ್ಯವಾದಷ್ಟು ಬೇಗ ಸಮಯ ಬದ್ಧವಾಗಿ ಮುಕ್ತಾಯಗೊಳಿಸಲು ನಿಯಮಿತವಾಗಿ ಭೇಟಿಯಾಗಲು ತಮ್ಮ ಸಮಾಲೋಚನಾ ತಂಡಗಳಿಗೆ ಸೂಚನೆ ನೀಡಿದರು.

    300x250 AD

    ಸಂಬಂಧಿತ ಪಾಲುದಾರರ ಬೆಂಬಲದ ಮೇರೆಗೆ, 2030 ರ ಮೊದಲು ಡಾಲರ್ 50 ಶತಕೋಟಿ ಗುರಿಯನ್ನು ಸಾಧಿಸಲು ಪ್ರಯತ್ನಿಸಲು 2018 ರ ಶೃಂಗಸಭೆಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

    ಈ ನಿಯಮಿತ ಮಾತುಕತೆಗಳು ಎರಡೂ ದೇಶಗಳ ವ್ಯಾಪಾರ ಸಮುದಾಯದ ತೊಂದರೆಗಳು ಮತ್ತು ಪೂರೈಕೆ ಸರಪಳಿ ಸೇರಿದಂತೆ ಉದಯೋನ್ಮುಖ ವ್ಯಾಪಾರ-ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top