• Slide
  Slide
  Slide
  previous arrow
  next arrow
 • ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ-ಸುರೇಶ್ಚಂದ್ರ ಹೆಗಡೆ

  300x250 AD

  ಶಿರಸಿ: ಮೂಲ ಸಂಪ್ರದಾಯಕ್ಕೆ ದಕ್ಕೆಯಾಗದ ರೀತಿಯಲ್ಲಿ ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು,ಉಳಿದೆಲ್ಲಾ ಕಲೆಗಳಿಗಿಂತ ವಿಶಿಷ್ಟವಾಗಿದೆ.ಇದು ಜಾನಪದ ಕಲೆಯಾಗಿ ಗುರುತಿಸಲ್ಪಟ್ಟಿದ್ದರೂ ಶಾಸ್ತ್ರೀಯ ಕಲೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನಮನೆ ಹೇಳಿದ್ದಾರೆ.

  ಅವರು ನಕ್ಷೆ ಬಯಲು ರಂಗ ಮಂದಿರದಲ್ಲಿ ನಡೆದ ಮಾಗಧ ವಧೆ ಯಕ್ಷಗಾನ ಪ್ರದರ್ಶನದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
  ಸದ್ಬವನಾ ಸೇವಾ ಸಂಸ್ಥೆ(ರಿ.) ಶಿರಸಿ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಪ್ರಾಯೋಜಕತ್ವದಲ್ಲಿ ಊರನಾಗರಿಕರ ಸಹಕಾರದೊಂದಿಗೆ ನಡೆದ ಕಾಯರ್ಯಕ್ರಮದ ಅಧ್ಯಕ್ಷತೆಯನ್ನು ಹುಲೇಕಲ್ ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ ಹೆಗಡೆ ವಹಿಸಿದ್ದರು. ವಿದ್ಯುತ್ ಗುತ್ತಿಗೆದಾರ ಜಿ.ಎನ್.ಹೆಗಡೆ ನಕ್ಷೆ, ಯಕ್ಷಗಾನ ತರಬೇತುದಾರ ಶ್ರೀಧರ ಹೆಗಡೆ ನಕ್ಷೆ ಹಾಗೂ ಗಜಾನನ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಆರಂಭದಲ್ಲಿ ಸದ್ಬವನಾ ಅಧ್ಯಕ್ಷ ಜಿ.ವಿ.ಹೆಗಡೆ ಓಣಿಕೇರಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ನಂತರ ನಡೆದ ಮಾಗಧ ವಧೆ ಯಕ್ಷಗಾನದ ಪ್ರದರ್ಶನದ ಹಿಮ್ಮೆಳದಲ್ಲಿ : ಭಾಗವತರಾಗಿ ಗಜಾನನ ಭಟ್ಟ ತುಳಗೇರಿ ಮೃದಂಗ : ಶ್ರೀಪಾದ ಭಟ್ಟ ಮೂಡಗಾರ, ಚಂಡೆ ಪ್ರಮೋದ ಕಬ್ಬಿನಗದ್ದೆ ಸಹಕರಿಸಿದರು.

  300x250 AD

  ಮುಮ್ಮೇಳದಲ್ಲಿ ಶ್ರೀಮತಿ ಲತಾ ಗಿರಿಧರ ಹೊನ್ನೆಗದ್ದೆ (ಧರ್ಮರಾಯ), ಶ್ರೀಮತಿ ಮಮತಾ ದಿನೇಶ ಹೆಗಡೆ ಹೊನ್ನೆಗದ್ದೆ (ಭೀಮ), ಕು. ಭೂಷಣ ಹೆಗಡೆ ಓಣಿಕೇರಿ (ಅರ್ಜುನ) ,ಕು: ಮೈತ್ರಿ ನಾಯ್ಕ ಹೊಸ್ಮನೆ (ಕೃಷ್ಣ),ಗೌತಮಿ ಹೆಗಡೆ ಹುಲೇಕಲ್ (ಸತ್ಯಬಾಮೆ), ಶ್ರೀಮತಿ ಜ್ಯೋತಿ ಹೆಗಡೆ (ನಾರದ) ಹಾಗೂ ಬಾಲಗೋಪಾಲರಾಗಿ ಕು.ರಮ್ಯ ನಾಯ್ಕ ಮತ್ತು ಕು.ನಿಶ್ಚಿತಾ ಪುಜಾರಿ ಹೊಸ್ಮನೆ ಇವರು ಪ್ರದರ್ಶನ ನೀಡಿದರು.
  ಶ್ರೀ ಗುರು ಅಯ್ಯಪ್ಪ ಸಾಂಸ್ಕøತಿಕ ಸಂಘ (ರಿ) ಮತ್ತು ವಿಘ್ನೇಶ್ವರ ದೇವರ ಟ್ರಸ್ಟ (ರಿ.) ಕೆಂಗ್ರೆಮಠ ಹಾಗೂ ಸಮೃದ್ದಿ ಪ್ರತಿಷ್ಠಾನ ದಾಸನಕೊಪ್ಪ ಇವರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮಕ್ಕೆ ವಿನಯ ಭಟ್ ತಂಡಿಮನೆ ಇವರು ಒದಗಿಸಿದ ವೇಷ ಭೂಷಣ ಮೆರಗು ನೀಡಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top