Slide
Slide
Slide
previous arrow
next arrow

ಭಾರತದ ರಫ್ತು 37% ವೃದ್ಧಿ

300x250 AD

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ 2021ರ ಡಿಸೆಂಬರ್ ತಿಂಗಳ ವರೆಗೆ ಭಾರತದ  ರಫ್ತು ವಾರ್ಷಿಕ ಆಧಾರದ ಮೇಲೆ ಶೇಕಡ  37 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.


ಭಾರತವು 300 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ರಫ್ತು ಮಾಡಿದ್ದು, 2020-2021ರ ಒಟ್ಟು ರಫ್ತಿನ ಪ್ರಮಾಣಕ್ಕಿಂತ ಶೇಕಡಾ 30 ರಷ್ಟು ಹೆಚ್ಚಳ ಕಂಡು ಬಂದಿದೆ. ಈ ವರ್ಷ ಭಾರತದ ಆರ್ಥಿಕತೆಯಲ್ಲಿ ಒಟ್ಟು ರಫ್ತಿನ ಪ್ರಮಾಣ 400 ಶತಕೋಟಿ ಡಾಲರ್ ಮೀರಲಿದೆ ಎಂದು ಅಂದಾಜಿಸಲಾಗಿದೆ.


ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಚೀನಾದಿಂದ ಭಾರತ  ಮಾಡಿಕೊಳ್ಳುತ್ತಿದ್ದ ಆಮದು ಪ್ರಮಾಣವು ಯುಪಿಎ ಅವಧಿಯಲ್ಲಿ ಶೇಕಡ 1160 ರಷ್ಟಿದ್ದು, NDA ಅವಧಿಯಲ್ಲಿ ಶೇಕಡ 8ಕ್ಕೆ  ಇಳಿಮುಖ ಕಂಡಿದೆ. NDA ಅವಧಿಯಲ್ಲಿ ಚೀನಾದ ಜೊತೆಗಿದ್ದ ವಾಣಿಜ್ಯ ಕೊರತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಇಳಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೊಯಲ್ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top