Slide
Slide
Slide
previous arrow
next arrow

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ, ಅರ್ಧದಷ್ಟು ಪ್ರಕರಣ ಸಿರಸಿಯಲ್ಲಿ ವರದಿಯಾಗಿದ್ದು ಆತಂಕಕಾರಿ; ಡಾ.ದಿನೇಶ್ ಹೆಗಡೆ

300x250 AD

ಶಿರಸಿ: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರಿನ ಅರ್ಧದಷ್ಟು ಪ್ರಕರಣ ಶಿರಸಿಯಲ್ಲಿ ಕಾಣಬಂದಿದೆ ಎಂದು ಡಾ.ದಿನೇಶ್ ಹೆಗಡೆ ಹೇಳಿದರು.


ಅವರು ರೋಟರಿ ಕ್ಲಬ್ ಮತ್ತು ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ವ್ಯಸನಮುಕ್ತ ಸಮಾಜ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ತಂಬಾಕು ಪದಾರ್ಥಗಳ ಸೇವನೆ, ಕುಡಿತ,ಮಾದಕ ದ್ರವ್ಯ ದ ಗೀಳು, ಧೂಮ್ರಪಾನ ಮತ್ತು ಮೊಬೈಲ್ ಅಂತರ್ಜಾಲದ ನಿರಂತರವಾದ ಬಳಕೆ ಇವೆಲ್ಲ ಆರೋಗ್ಯದ ಮೇಲೆ ಮಾರಣಾಂತಿಕ ದುಷ್ಪರಿಣಾಮಗಳನ್ನು ಬೀರುತ್ತದೆ. ಹದಿ ಹರೆಯದ ವಯಸ್ಸಿನಲ್ಲೇ ಇಂತಹ ದುಶ್ಚಟಗಳಿದೆ ದಾಸರಾಗುತ್ತಿದ್ದಾರೆ. ಕ್ಯಾನ್ಸರ್, ಕುರುಡುತನ, ಮಾನಸಿಕ ಸಮಸ್ಯೆ, ಅಸ್ತಮಾ, ಹೃದಯಾಘಾತ,ಲಿವರ್ ಸಮಸ್ಯೆ ಗಳಂತ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಳ್ಳುವದಲ್ಲದೆ ಯೋಗ, ವ್ಯಾಯಾಮ ಮಾಡುವ ರೂಢಿಯನ್ನು ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ. ದುಶ್ಚಟಗಳಿಂದ ದೂರವಿರಿ ಎಂದು ಕಿವಿ ಮಾತು ಹೇಳಿದರು.

300x250 AD


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋಮಲಾ ಭಟ್ ರವರು ವಹಿಸಿದ್ದರು, ರೋಟೇರಿಯನ್ ಪಾಂಡುರಂಗಪೈ,ಸುಧೇಂದ್ರ ದೇಶಪಾಂಡೆ, ಶ್ರೀನಿವಾಸ್, ನಿವೃತ್ತ ಪ್ರಾಚಾರ್ಯ ಹೊಸಮನಿ ದೈಹಿಕ ನಿರ್ದೇಶಕ ಪ್ರಶಾಂತ್ ದೇವಾಡಿಗ ಹಾಗೆಯೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ರಾಘವೇಂದ್ರ ಹೆಗಡೆ ಸ್ವಾಗತಿಸಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top