• Slide
    Slide
    Slide
    previous arrow
    next arrow
  • ಇಲೆಕ್ಟ್ರಾನಿಕ್ ವೆಹಿಕಲ್ ವಲಯದ ಮುಂದಿನ 5 ವರ್ಷದಲ್ಲಿ 12.6 ಬಿಲಿಯನ್ ಡಾಲರ್ ಹೂಡಿಕೆ

    300x250 AD

    ನವದೆಹಲಿ: ಮುಂಬರುವ ಐದು ವರ್ಷಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನ ಮೌಲ್ಯ ಸರಪಳಿಯಲ್ಲಿ 12.6 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳಿಗೆ ಸಾಕ್ಷಿಯಾಗಲಿದೆ ಎಂದು `ಎಲೆಕ್ಟ್ರಿಕ್ ಮೊಬಿಲಿಟಿ ಇನ್ ಫುಲ್ ಗೇಮ್’ ಶೀರ್ಷಿಕೆಯ ವರದಿ ತಿಳಿಸಿದೆ.

    ಕೊನೆಯ ಮೈಲಿ ವಿತರಣೆಯ ಮೇಲೆ ಕೇಂದ್ರೀಕರಿಸಿದ ಈ ಹೂಡಿಕೆಗಳಿಂದ ಭಾರತೀಯ ರಿಯಲ್ ಎಸ್ಟೇಟ್ ವಲಯವು ಹೆಚ್ಚುವರಿ ಉತ್ಪಾದನಾ ಘಟಕಗಳು, ಕೈಗಾರಿಕಾ ಉದ್ಯಾನವನಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳಿಂದ ಪ್ರಯೋಜನ ಪಡೆಯುತ್ತದೆ.

    ಸಾರ್ವಜನಿಕ ಸಾರಿಗೆಯ ವಿದ್ಯುದೀಕರಣ ಮತ್ತು ಎಲೆಕ್ಟ್ರಿಕ್ ವಾಹನಗಳ (EV ಗಳು) ಮೊದಲ ಬಾರಿಗೆ ಖರೀದಿಸುವವರಿಗೆ ನೀಡಲಾಗುವ ತೆರಿಗೆ ಪ್ರಯೋಜನಗಳು ಮತ್ತು ಪೆÇ್ರೀತ್ಸಾಹದಂತಹ ಹಲವಾರು ಇತರ ಅಂಶಗಳು ಉತ್ತೇಜಕವಾಗಿದೆ.

    300x250 AD

    ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಇವಿಗಳಿಗೆ ಯೋಜಿತ ಹೂಡಿಕೆಯ ವಿಷಯದಲ್ಲಿ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿವೆ. ವರದಿಯ ಪ್ರಕಾರ ಅವು ಒಟ್ಟು ಹೂಡಿಕೆಯಲ್ಲಿ ಕ್ರಮವಾಗಿ 34 ಪ್ರತಿಶತ ಮತ್ತು 12 ಪ್ರತಿಶತವನ್ನು ಪಡೆದುಕೊಂಡಿವೆ.

    “ರಿಯಲ್ ಎಸ್ಟೇಟ್ ವಲಯದವರು EV ಗಳ ಉತ್ಪಾದನೆ, ವೇರ್‍ಹೌಸಿಂಗ್, ಚಾರ್ಜಿಂಗ್ ಸ್ಟೇಷನ್‍ಗಳು ಮತ್ತು ಡೀಲರ್‍ಶಿಪ್‍ಗಳ ಅವಕಾಶವನ್ನು ಬಳಸಿಕೊಳ್ಳಬಹುದು. ಸರ್ಕಾರವು 2030 ರ ವೇಳೆಗೆ 110 GWh EV ಬ್ಯಾಟರಿಗಳನ್ನು ತಯಾರಿಸುವ ಯೋಜನೆ ಹೊಂದಿದೆ. ಈ ಬೆಳವಣಿಗೆಯು ಭಾರತದಲ್ಲಿ ಸುಮಾರು 1,300 ಎಕರೆಗಳಷ್ಟು ಭೂಪ್ರದೇಶದ ಉತ್ಪಾದನಾ ಅಗತ್ಯವನ್ನು ಹುಟ್ಟುಹಾಕುತ್ತದೆ,” ಎಂದು Colliers ನ ಹಿರಿಯ ಕಾರ್ಯನಿರ್ವಾಹಕ ರಮೇಶ್ ನಾಯರ್ ಅವರು ತಿಳಿಸಿದ್ದಾರೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top