• Slide
    Slide
    Slide
    previous arrow
    next arrow
  • ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಕೋಳಿ ಫಾರಂ ತ್ಯಾಜ್ಯ

    300x250 AD

    ಶಿರಸಿ: ಇಲ್ಲಿನ ಹುಲೇಕಲ್ ರಸ್ತೆಯ ಹುತ್ಗಾರ ಬಳಿಯ ಕೋಳಿ ಫಾರಂನ ಗಲೀಜು ನೀರನ್ನು ಲೊಕೋಪಯೋಗಿ ಇಲಾಖೆ ನೂತನವಾಗಿ ನಿರ್ಮಾಣ ಮಾಡಿದ ಗಟಾರಕ್ಕೆ ಬಿಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಗಲೀಜು ನೇರವಾಗಿ ಕೆಂಗ್ರೆ ಜಲಾಯನ ಪ್ರದೇಶಕ್ಕೆ ಸೇರಲಿದೆ.

    ಕೆಂಗ್ರೆಯಿoದ ಶಿರಸಿಗೆ ಕುಡಿಯುವ ನೀರೂ ಕೂಡ ಪೂರೈಕೆ ಆಗುತ್ತಿದೆ ಹಾಗೂ ಸಮೀಪ ಸರಕಾರಿ ಶಾಲೆಗಳಿದ್ದು, ಅದರ ಕುಡಿಯುವ ನೀರಿನ ಬಾವಿಗೂ ಸೇರುವ ಆತಂಕ ನಿರ್ಮಾಣ ಆಗಿದೆ.ಕಳೆದ ಹಲವು ವರ್ಷಗಳಿಂದ ಕೋಳಿ ಫಾರಂನಿoದ ವಾಸನೆ ಬರುತ್ತಿದ್ದು, ಸುತ್ತಲಿನ ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

    300x250 AD

    ಈಗಾಗಲೇ ನಿವಾಸಿಗಳು ತಹಸೀಲ್ದಾರರಿಗೆ, ಗ್ರಾಮ ಪಂಚಾಯತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸಂಬoಧಪಟ್ಟ ಇಲಾಖೆ, ಹುತ್ಗಾರ ಪಂಚಾಯತ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ನಡೆಸುವದಾಗಿ ಅಸಮಧಾನಿತ ನಾಗರೀಕರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top