Slide
Slide
Slide
previous arrow
next arrow

ಮತಾಂತರ ನಿಷೇಧ ಕಾಯಿದೆಯ ಅಗತ್ಯತೆ

300x250 AD


ಹರಿತ ಲೇಖನಿ: ಕಳೆದ ಎರಡು ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಕೆಳದ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ವಿಧಾನ ಸಭಾ ಅಧಿವೇಶನದಲ್ಲಿ ಭಾಜಪ ಶಾಸಕರಾದ ಶ್ರೀ ಗೂಳಿಹಟ್ಟಿ ಶೇಖರವರು ವಿಧಾನಸಭೆಯಲ್ಲಿ ತಮ್ಮ ತಾಯಿ ಕ್ರೈಸ್ತ ಮತಕ್ಕೆ ಬಲವಂತವಾಗಿ ಮತಾಂತರ ಆಗಿದ್ದಾರೆ ಮತ್ತು ತಮ್ಮ ಕ್ಷೇತ್ರದಲ್ಲಿ ಸರಿಸುಮಾರು 20 ಸಾವಿರ ಜನರನ್ನು ವಿವಿಧ ಆಮಿಷಗಳ ಮೂಲಕ ಕ್ರೈಸ್ತ ಮತಕ್ಕೆ ಮತಾಂತರ ಮಾಡಿದ್ದಾರೆಂದು ಆರೋಪ ಮಾಡಿದರು. ತದನಂತರ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯ ಬಗ್ಗೆ ಕೂಗು ಹೆಚ್ಚಾಯಿತು. ತದನಂತರ ಅನೇಕ ಸ್ವಾಮೀಜಿಗಳ ಮತ್ತು ಹಿಂದೂ ಸಂಘಟನೆಗಳ ನಿಯೋಗ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಬೇಗ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಆಗ್ರಹ ಮಾಡಿದರು.

ಗೃಹ ಸಚಿವರು, ಸರ್ಕಾರದ ಅನೇಕ ಸಚಿವರು ಸಹ ಈಗ ಬೆಳಗಾವಿ ಅಧಿವೇಶದಲ್ಲಿ ಈ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಕ್ರೈಸ್ತ ಸಂಘಟನೆಗಳು, ಬಿಷಪ್ ಸೇರಿ ಅನೇಕರು ಮತ್ತು ಕಾಂಗ್ರೆಸ್ ನಾಯಕರು ಇದನ್ನು ವಿರೋಧ ಮಾಡುತ್ತಿದ್ದಾರೆ. ಇದು ಸಂವಿಧಾನವಿರೋಧಿ, ಕ್ರೈಸ್ತವಿರೋಧಿ, ಸಂವಿಧಾನದಲ್ಲಿ ಮತಪ್ರಚಾರ ಮಾಡುವ ಅವಕಾಶ ಇದೆ ಅದಕ್ಕೆ ಈ ಕಾಯಿದೆಯನ್ನು ತರಬಾರದು ಎಂದು ಆಗ್ರಹ ಮಾಡುತ್ತಿದ್ದಾರೆ. ಈ ನೆಲೆಗಟ್ಟಿನಲ್ಲಿ ಈ ಕಾಯಿದೆಯ ಅಗತ್ಯತೆ, ಪರಿಣಾಮ, ಮಹತ್ವದ ಬಗ್ಗೆ ಚರ್ಚೆ ಮಾಡುವುದು ಅನಿವಾರ್ಯವಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಮತಾಂತರ ಪ್ರಕರಣಗಳು:
ರಾಜ್ಯದಲ್ಲಿ ಹಲವು ಕಡೆ ಮತಾಂತರದ ಪ್ರಕರಣಗಳು ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ. ಅದಕ್ಕೆ ತಾಜಾ ಉದಾಹರಣೆಯೆಂದರೆ ಡಿಸೆಂಬರ್ 11 ರಂದು ಮಂಗಳೂರಿನಲ್ಲಿ ಒಂದೇ ಕುಟುಂಬದ 4 ಜನ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಹಿಂದೆ ಮತಾಂತರದ ಕಾರಣ ಇದೆ ಎಂದು ಡೆತ್ ನೊಟ್‌ದಲ್ಲಿ ಇದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ ಇವರು ಹೇಳಿದ್ದಾರೆ.
ದಾವಣಗೇರೆಯಲ್ಲಿ ವೀರಶೈವ ಮಹಾಸಭಾದ ಸತ್ಯಶೋಧನಾ ಸಮಿತಿ ಅಲ್ಲಿನ 10 ಗ್ರಾಮದಲ್ಲಿ ಸಮೀಕ್ಷೆ ಮಾಡಿದಾಗ ಲಂಬಾಣಿ, ಕುರುಬ, ವೀರಶೈವ, ಬ್ರಾಹ್ಮಣ ಸಮುದಾಯ ಸೇರಿ ನೂರಾರು ಕುಟುಂಬಗಳನ್ನು ಕ್ರೈಸ್ತ ಮತಕ್ಕೆ ವಿವಿಧ ಹಣ ಮತ್ತು ಅನ್ಯ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ವೀರ ಶೈವ ಮಹಾಸಭಾದ ಅಧ್ಯಕ್ಷ ಮತ್ತು ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ತಮ್ಮ ಪದಾಧಿಕಾರಿಗಳಿಗೆ ಪತ್ರ ಬರೆದು ವೀರಶೈವ ಸಮುದಾವರು ವಿವಿಧ ಆಮಿಷಗಳಿಗೆ ಬಲಿಯಾಗಿ ಮತಾಂತರ ಆಗುತ್ತಿರುವುದು ಚಿಂತಾಜನಕ ವಿಷಯವಾಗಿದೆ. ಅದನ್ನು ತಡೆಯಲು ಮತ್ತು ಮತಾಂತರವಾದವರನ್ನು ವಾಪಾಸು ಕರೆತರಲು ವೀರಶೈವ ಮಹಾಸಭಾ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಡಿಸೆಂಬರ್ 12 ರಂದು ಕೋಲಾರದ ಶ್ರೀನಿವಾಸ ನಗರದಲ್ಲಿ ಅಮಾಯಕ ಹಿಂದೂಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುವ ಪ್ರಕರಣದಲ್ಲಿ ಆಂಧ್ರ ಮೂಲದ 4 ಜನ ಪಾದ್ರಿಗಳನ್ನು ಪೋಲಿಸರು ಬಂಧಿಸಿದರು. ಕಳೆದ 1 ವರ್ಷದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ರಾಮನಗರ ದಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಕ್ರೈಸ್ತರ 7 ಪ್ರಾರ್ಥನಾ ಸ್ಥಳಗಳನ್ನು ತೆರವು ಮಾಡಲು ಆದೇಶ ನೀಡಿದೆ. ಬೆಂಗಳೂರು ನಗರ, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ ಮುಂತಾದ ಕಡೆಗಳಲ್ಲಿ ಅನಧಿಕೃತವಾಗಿ ಅಮಾಯಕ ಹಿಂದೂ ಹೆಣ್ಣು ಮಕ್ಕಳು, ವಯಸ್ಕರು, ಮಕ್ಕಳನ್ನು ಸೇರಿಸಿ ಮತಾಂತರ ಮಾಡುವ ಪ್ರಾರ್ಥನಾ ಸ್ಥಳಗಳ ಮೇಲೆ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಿಂದೂ ಪರ ಸಂಘಟನೆಗಳು ಹೋಗಿ ವಿರೋಧವನ್ನು ವ್ಯಕ್ತ ಮಾಡಿವೆ. ಈ ಎಲ್ಲಾ ಘಟನೆಗಳು ರಾಜ್ಯದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿರುವುದು, ಕಾನೂನು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬರುತ್ತದೆ. ಇದಲ್ಲದೇ ಕ್ರೈಸ್ತ ಮತಪ್ರಚಾರ ಮಾಡುವ ಅನಪೊಲ್ಡಿಂಗವರ್ಡ ಮಿಶಿನರಿಯ ಮುಖ್ಯಸ್ಥ ಡೆವಿಡ್ ಇವರು 2020 ರ ಕೋರೊನಾ ಕಾಲಾವಾಧಿಯಲ್ಲಿ ಸಹಾಯದ ನೆಪದಲ್ಲಿ ಭಾರತದ 50 ಸಾವಿರ ಹಳ್ಳಿಗಳಲ್ಲಿ 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಿರುವ ಬಗ್ಗೆ ಸ್ವತಃ ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ವಿದೇಶಿ ಹಣದಿಂದ ಮತಾಂತರ ಮಾಡಲು ಕುಮ್ಮಕ್ಕು ದೊರಕುವುದು:
ಕೇಂದ್ರದ ಗೃಹ ಇಲಾಖೆಯ ವರದಿಯ ಪ್ರಕಾರ ಭಾರತದಲ್ಲಿ ಧಾರ್ಮಿಕ ಮತಾಂತರಕ್ಕೆ ವಾರ್ಷಿಕವಾಗಿ ಸರಿ ಸುಮಾರು 10,500 ಕೋಟಿ ರೂಪಾಯಿಗಳನ್ನು ಕ್ರೈಸ್ತ ಸಂಸ್ಥೆಗಳು ಮತಾಂತರಕ್ಕೆ ಖರ್ಚು ಮಾಡುತ್ತವೆ ಹೇಳಿದೆ. ಅಮೆರಿಕಾದ ಕ್ರೈಸ್ತ ಸಂಘಟನೆಯಾ “ದ ಇಂಟರನ್ಯಾಶನಲ್ ಮಿಷನ್ ಬೋರ್ಡ”ನ 23 ಜನವರಿ 2021 ರ ವರದಿಯ ಪ್ರಕಾರ ಭಾರತದಲ್ಲಿ ಮತಾಂತರ ಉದ್ದೇಶಕ್ಕೆ 170 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಖರ್ಚು ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಸಹ ವಿದೇಶದಿಂದ ಹಣ ಪಡೆದು ದೇಶದಲ್ಲಿ ಮತಾಂತರ ಚಟುವಟಿಕೆ ಮಾಡುವ ಹಲವು ಕ್ರೈಸ್ತ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಸೆಪ್ಟೆಂಬರ್ 2021 ರಂದು ಮತಾಂತರ ಉದ್ದೇಶಕ್ಕೆ ವಿದೇಶಿ ಹಣ ದುರ್ಬಳಕೆ ಮಾಡುವ 6 ಸಂಸ್ಥೆಗಳ ಎಫ್‌ಸಿಆರ್‌ಸಿಎ ಅನುಮತಿಯನ್ನು ರದ್ದು ಮಾಡಿದೆ. 2018 ರಲ್ಲಿ ಕೇಂದ್ರದ ಗೃಹ ಇಲಾಖೆಯು ವಿದೇಶದಿಂದ ಹಣ ಪಡೆದು ಎಫ್‌ಸಿಆರ್‌ಸಿಎ ನಿಯಮ ಪಾಲನೆ ಮಾಡದ 156 ಎನಜಿಒಗಳ ಅನುಮತಿ ರದ್ದು ಮಾಡಿದೆ.
ನವೆಂಬರ್ 2020 ರಂದು ಆದಾಯ ಇಲಾಖೆಯು ಕೇರಳದ ಬಿಲಿವರ‍್ಸ ಇಸ್ಟರ್ನ ಚರ್ಚ ಮೇಲೆ ದಾಳಿ ಮಾಡಿದಾಗ 8 ಕೋಟಿ ಕಪ್ಪು ಹಣ ನಗದು ಸಿಕ್ಕಿತು. ಕಳೆದ 7 ವರ್ಷದಲ್ಲಿ ಈ ಚರ್ಚ 7000 ಕೋಟಿ ರೂ ನಿಯಮಬಾಹಿರವಾಗಿ ಪಡೆದ ಕಾರಣಕ್ಕೆ ಅದರ ಎಫ್‌ಸಿಆರ್‌ಸಿಎ ಅನುಮತಿ ರದ್ದು ಮಾಡಲಾಗಿದೆ. ಒಟ್ಟಾರೆ ದೇಶದಲ್ಲಿ ವಿದೇಶಿ ಹಣದಿಂದ ಬಹುದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.

ಮತಾಂತರದ ಪರಿಣಾಮಗಳು:
ಸ್ವಾತಂತ್ರ್ಯದ ನಂತರ ದೇಶದಲ್ಲಿ ಕ್ರೈಸ್ತ ಸಂಸ್ಥೆಗಳ ಬಗ್ಗೆ ಮೃದು ಧೋರಣೆಯ ಪರಿಣಾಮವಾಗಿ ದೇಶದಲ್ಲಿ ವ್ಯಾಪಕವಾಗಿ ಮತಾಂತರ ನಡೆದಿದೆ. 1947 ರಲ್ಲಿ ನಾಗಲ್ಯಾಂಡ್ ದಲ್ಲಿ 200 ರಷ್ಟು ಕ್ರೈಸ್ತರಿದ್ದಿದ್ದು, 2021 ರ ಜನಗಣತಿಯ ಪ್ರಕಾರ 17.90 ಲಕ್ಷ ಕ್ರೈಸ್ತರು ಅಂದರೆ ಶೇ 90.02 ದಷ್ಟಾದರು. ಇದರ ಪರಿಣಾಮವಾಗಿ ಅಲ್ಲಿನ ನಾಗಾ ಸಂಸ್ಕೃತಿಯು ಸಂಪೂರ್ಣವಾಗಿ ನಶಿಸಿ ಹೋಗಿದೆ.

ಕ್ರೈಸ್ತರ ಆಕ್ರಮಕ ಮತಪ್ರಚಾರದಿಂದ ಮೇಘಾಲಯ ರಾಜ್ಯವು ಸಹ ಶೇ 90 ರಷ್ಟು ಕ್ರೈಸ್ತಮಯವಾಯಿತು. ಮಿಝೋರಾಮ ರಾಜ್ಯದಲ್ಲಿ ಸಹ ಕ್ರೈಸ್ತರ ಮತ್ರಚಾರದಿಂದ 87 ಶೇ ಕ್ರೈಸ್ತಮಯವಾಯಿತು. 2018 ರಲ್ಲಿ ಕೇಂದ್ರ ಸರ್ಕಾರವು ಮಿಝೋರಾಮ ರಾಜ್ಯಪಾಲರನ್ನಾಗಿ ಕೇರಳದ ಭಾಜಪ ಅಧ್ಯಕ್ಷ ಕುಮ್ಮನ್ ರಾಜಶೇಖರನ ಇವರನ್ನು ನೇಮಕ ಮಾಡಿದಾಗ ಅಲ್ಲಿ ಚರ್ಚ ಮಿಝೋರಾಮ ಕ್ರೈಸ್ತ ರಾಜ್ಯವಾಗಿರುವುದರಿಂದ ಇಲ್ಲಿ ಹಿಂದೂ ರಾಜ್ಯಪಾಲ ಬೇಡ ಎಂದು ವಿರೋಧ ಮಾಡಿತು. ಕೊನೆಗೆ ರಾಜಶೇಖರನ್ ಇವರನ್ನು ಕೇಂದ್ರ ಸರ್ಕಾರವು ವಾಪಾಸು ಕರೆಸಿಕೊಂಡಿತು.

ಅದೇ ರೀತಿಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ಸಹ ಅತಿಹೆಚ್ಚು ಮತಾಂತರ ಚಟುವಟಿಕೆಗಳು ನಡೆಯುತ್ತಿದೆ. ಅದರಿಂದ ಅಲ್ಲಿನ ದೇವಾಲಯದ ಮೇಲೆ ಆಕ್ರಮಣಗಳು ಹೆಚ್ಚಾಗಿದೆ. ಇತ್ತಿಚಿಗೆ ಆಂಧ್ರಪ್ರದೇಶದ ಪಾದ್ರಿ ಉಪೇಂದ್ರ ಎನ್ನುವರು ದೇಶದಲ್ಲಿ ಕ್ರೈಸ್ತರ 2.12 ಕೋಟಿ ಕ್ರೈಸ್ತರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದರು. 2001 ಜನಗಣತಿ ಪ್ರಕಾರ 2.40 ಕೋಟಿ ಜನಸಂಖ್ಯೆ ಇರುವುದು 2011 ರ ಜನಗಣತಿ ಪ್ರಕಾರ 3.2 ಕೋಟಿ ಆಗಿದೆ. 2011 ರ ಜನಗಣತಿಯಂತೆ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಇದೇ ಮುಂದುವರೆದರೆ ಮುದೊಂದು ದಿನ ಭಾರತದ ಪೋಪ್ ಜಾನ್ ಪಾಲ್ 2 ಆಶಯದಂತೆ ಭಾರತವು ಕ್ರೈಸ್ತಮಯವಾಗುವುದು.

300x250 AD

ಭಾರತದ ಸಂವಿಧಾನದ ಕಲಮ್ 25 ಇದು ಕ್ರೈಸ್ತರಿಗೆ ಮತಪ್ರಚಾರ ಮಾಡುವ ಅವಕಾಶ ನೀಡಿದೆಯಾ?:
ರಾಜ್ಯದಲ್ಲಿ ಕ್ರೈಸ್ತ ಮುಖಂಡರು ಭಾರತದ ಸಂವಿಧಾನದ ಕಲಂ 25 ಕ್ರೈಸ್ತರಿಗೆ ಮತಪ್ರಚಾರ ಮಾಡುವ ಮತ್ತು ಮತಾಂತರ ಮಾಡುವ ಅಧಿಕಾರ ನೀಡಿದೆ ಎಂದು ವಾದ ಮಾಡುತ್ತಿದ್ದಾರೆ. ಆದರೆ ಇದು ಶುದ್ದ ಸುಳ್ಳು. ಭಾರತ ಸರಕಾರವು ಯಾವುದೇ ಸಮುದಾಯಕ್ಕೆ ಮತಾಂತರ ಮಾಡುವ ಅಧಿಕಾರ ನೀಡಿಲ್ಲ. ಭಾರತದ ಸಂವಿಧಾನದ ಸಮಿತಿ ಸಭೆಯ ಸದಸ್ಯರಾದ ಶ್ರೀ ಮುನ್ಶಿಯವರ ಹೇಳಿಕೆಯ ಪ್ರಕಾರ ಕ್ರೈಸ್ತ ಸಮುದಾಯವರು ಸಂವಿಧಾನ ರಚನೆ ಸಮಯದಲ್ಲಿ ಮತಪ್ರಚಾರ ಮಾಡುವ ಅಧಿಕಾರ ಬೇಕೆಂದು ಆಕ್ರಮಕವಾಗಿ ಆಗ್ರಹ, ಒತ್ತಡ ಹೇರಿದ್ದರು ಎಂದು ಹೇಳಿದ್ದರು. ಸಂವಿಧಾನದ ಕಲಂ 25 ರಲ್ಲಿ ಈ ರೀತಿಯಲ್ಲಿ ಉಲ್ಲೇಖ ಇದೆ. “ಆತ್ಮಸಾಕ್ಷಿಯ ಸ್ವಾತಂತ್ರ್ಯ, ವೃತ್ತಿಯ ಸ್ವಾತಂತ್ರ್ಯ, ಮತದ ಆಚರಣೆ ಮಾಡುವ ಸ್ವಾತಂತ್ರ್ಯ, ಮತದ ಪ್ರಚಾರ ಮಾಡುವ ಸ್ವಾತಂತ್ರ್ಯ”. ಇದರಲ್ಲಿ “ಮತದ ಪ್ರಚಾರ” (ಪ್ರೋಪಗೇಟ್) ಶಬ್ದವನ್ನು ತಪ್ಪಾಗಿ ಅಥೈಸಿ ತಮಗೆ ಸಂವಿಧಾನ ಮತ ಪ್ರಚಾರ ಮಾಡುವ ಸ್ವಾತಂತ್ರ್ಯ ನೀಡಿದೆ ಮತ್ತು ಕ್ರೈಸ್ತಯೇತರ ಸಮುದಾಯದವರಿಗೆ ಕ್ರೈಸ್ತ ಮತದ ಪ್ರಚಾರ ಹಕ್ಕು ಇದೆ ಎಂದು ವಾದಮಾಡಲಾಗುತ್ತದೆ. ಆದರೆ ಅದು ಶುದ್ದ ತಪ್ಪು. ಅವರ ಮತಪ್ರಚಾರ ಕೇವಲ ಅವರ ಸಮುದಾಯದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.1997 ರಲ್ಲಿ ಮಧ್ಯಪ್ರದೇಶ ಸರ್ಕಾರವು ಮತಾಂತರ ವಿರೋಧಿ ಕಾಯಿದೆ ತದಾಗ ಅಲ್ಲಿನ ಕ್ರೈಸ್ತರು ನ್ಯಾಯಾಲಯಕ್ಕೆ ಹೋದಾಗ ಮಾನ್ಯ ನ್ಯಾಯಾಲಯವು ಕಲಂ 25 ಪ್ರತಿಯೊಬ್ಬರಿಗೂ ಸದ್ವಿವೇಕ ಬುದ್ದಿಯಿಂದ ವರ್ತಿಸುವ ಸ್ವಾತಂತ್ರ್ಯ ನೀಡುತ್ತದೆ ವಿನಃ ಯಾರನ್ನೂ ಸಹ ಅವರ ಧರ್ಮದಿಂದ ಬೇರೆ ಮತಕ್ಕೆ ಕೊಂಡುಹೋಗುವ ಸ್ವಾತಂತ್ರ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಯಾವುದೇ ವ್ಯಕ್ತಿ ಸ್ವಇಚ್ಚೆಯಿಂದ ಯಾವುದೇ ಮತ ಸ್ವೀಕಾರ ಮಾಡಬಹುದು. ಆದರೆ ಮಾನಸಿಕ ಒತ್ತಡ ಹಾಕಿ, ವಿಶ್ವಾಸಘಾತ ಮಾಡಿ, ಬಲವಂತದಿಂದ, ಮೋಸದಿಂದ ಮತಾಂತರ ಮಾಡುವಂತಿಲ್ಲ ಎಂದು ಸ್ಷಷ್ಟವಾಗಿ ಹೇಳಿದೆ.

ರಾಜ್ಯದಲ್ಲಿ ಮತಾಂತರ ಮಾಡುವ ವಿವಿಧ ಪ್ರಕಾರಗಳು

  1. ಇಂದು ರಾಜ್ಯದಲ್ಲಿ ವಿವಿಧ ಮಾಧ್ಯಮಗಳಿಂದ ಮತಪ್ರಚಾರದ ಹೆಸರಿನಲ್ಲಿ ಮುಗ್ದ ಜನರ ಮತಾಂತರ ಮಾಡಲಾಗುತ್ತದೆ. ಅದರ ಕೆಲವು ವಿಧಗಳು ಕೆಳಗಿನಂತಿದೆ.
    ಗ್ರಾಮೀಣ ಪ್ರದೇಶ, ಹಳ್ಳಿಗಳಿಗೆ, ಹಿಂದೂಳಿದ ಕಾಲೋನಿಗಳಿಗೆ ಹೋಗಿ ಕ್ರೈಸ್ತ ಮತದ ಪ್ರಚಾರ ಮಾಡುವುದು.
  2. ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಾರ್ಥನಾಸಭೆಗಳ ನಿಯೋಜನೆ ಮಾಡಿ ಕ್ರೈಸ್ತ ಮತದ ಪ್ರಚಾರ ಮಾಡುವುದು.
  3. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮತಪ್ರಚಾರದ ಉದ್ದೇಶಕ್ಕೆ ಚರ್ಚಗಳನ್ನು ಕಟ್ಟುವುದು.
  4. ಆದಿವಾಸಿ, ಬುಡಕಟ್ಟು ಸಮುದಾಯದವರಿಗೆ ಹಣ, ಔಷಧಿ, ಬಟ್ಟೆ, ರೇಷನ್ ಆಮಿಷಗಳನ್ನು ನೀಡಿ ಮತಾಂತರ ಮಾಡುವುದು.
  5. ಆಸ್ಪತ್ರೆಗಳ ಮೂಲಕ ಬಡ ರೋಗಿಗಳನ್ನು ಮೋಸದಿಂದ ಚಿಕಿತ್ಸೆಯ ಹೆಸರಿನಲ್ಲಿ ಮತಾಂತರ ಮಾಡುವುದು.
  6. ಕಾನ್ವೆಂಟ್ ಶಾಲೆಗಳ ಮೂಲಕ ಮಕ್ಕಳಿಗೆ ಕ್ರೈಸ್ತ ಮತದ ಪ್ರಚಾರ ಮಾಡುವುದು, ಹಿಂದೂ ಧರ್ಮದ ಬಗ್ಗೆ ಅಪನಂಬಿಕೆ ಬರುವ ಹಾಗೆ ಮಕ್ಕಳಿಗೆ ಮತಿಭ್ರಮಣ ಮಾಡುವುದು.
  7. ಹಿಂದೂ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳನ್ನು ಇಟ್ಟು ಮಕ್ಕಳು ಹಿಂದೂ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡದಂತೆ ತಡೆಯುವುದು.
  8. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮದ ಆಚರಣೆಗಳಾದ ಕುಂಕುಮ, ಬಳೆ, ಕಾಲ್ಗೆಜ್ಜೆ, ಮುಂತಾದ ಆಚರಣೆಗಳ ನಿಷೇಧ ಹಾಕುವುದು.
  9. ಚರ್ಚಗಳನ್ನು ಹಿಂದೂ ದೇವಸ್ಥಾನದಂತೆ ನಿರ್ಮಾಣ ಮಾಡುವುದು, ಹಿಂದೂ ಸಂಪ್ರದಾಯದಂತೆ ಧ್ವಜಸ್ಥಂಭ, ಆರತಿ, ಪೂಜೆ, ನಾಮಕರಣ ವಿಧಿ, ತೀರ್ಥ ನೀಡುವುದು, ಸ್ತ್ರೋತ್ರ ಪಠಣ, ಮುಂತಾದ ಕೃತಿಗಳನ್ನು ಮಾಡುವುದು.
  10. ವಸತಿ ಗೃಹದಲ್ಲಿ ಯೇಸುವಿನ ಚರಿತ್ರೆ, ಕ್ರೈಸ್ತ ಮತದ ಬಗ್ಗೆ ಒಲವು ಬರುವ ಹಾಗೆ ಸಿನೆಮಾಗಳನ್ನು ತೋರಿಸುವುದು.

ಮತಾಂತರ ತಡೆಯಲು ಮಾಡಬೇಕಾದ ಉಪಾಯಗಳು:

  1. ಹಿಂದೂ ಧಾರ್ಮಿಕ ಶಿಕ್ಷಣವನ್ನು ಹಿಂದೂ ಸಮಾಜಕ್ಕೆ ನೀಡುವುದು. ಇಂದು ಹಿಂದೂ ಸಮಾಜಕ್ಕೆ ಹಿಂದೂ ಧಾರ್ಮಿಕ ಶಿಕ್ಷಣವು ಶಾಲೆ, ಮನೆ ಮತ್ತು ದೇವಸ್ಥಾನ ಎಲ್ಲಿಯೂ ಸಹ ಸಿಗುವುದಿಲ್ಲ. ಅದರಿಂದ ಧರ್ಮ ಬಿಡಬಾರದು ಎಂಬ ಆಭಿಮಾನ ಇಲ್ಲ. ಚಿಕ್ಕ ಆಮಿಷಗಳಿಗೆ ಬಲಿಯಾಗುತ್ತಾರೆ. ಅದಕ್ಕಾಗಿ ಹಿಂದೂ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಹಿಂದೂ ಧರ್ಮದ ಶಿಕ್ಷಣವನ್ನು ಹಿಂದೂ ಸಮಾಜದ ವಿವಿಧ ಸಮುದಾಯದ ಗುರುಗಳು ಅವರವರ ದೇವಸ್ಥಾನ, ಮಠಮಾನ್ಯಗಳಲ್ಲಿ ನೀಡಬೇಕು. ಅದರಿಂದ ಧರ್ಮಾಭಿಮಾನ ನಿರ್ಮಾಣವಾಗುವುದು. ಅದರಿಂದ ಅವರು ಮುಂದೆ ಆಮಿಷಗಳಿಗೆ ಬಲಿಯಾಗಿ ಮತಾಂತರವಾಗಲಾರರು.
  2. ಮತಾಂತರದ ದುಷ್ಪರಿಣಾಮದ ಬಗ್ಗೆ ಸಮಾಜದಲ್ಲಿ ಜನಜಾಗೃತಿ ಮೂಡಿಸುವುದು. ಮತಾಂತರದ ಉದ್ದೇಶದಿಂದ ನಡೆಯುವ ಕಾರ್ಯಕ್ರಮಗಳನ್ನು ಕಾನೂನು ಚೌಕಟ್ಟಿನಲ್ಲಿ ವಿರೋಧ ಮಾಡಿ ನಿಲ್ಲಿಸುವುದು.
  3. ಮತಾಂತರದ ಉದ್ದೇಶದಿಂದ ನಡೆಸುವ ಶಾಲೆ, ಮಹಾವಿದ್ಯಾಲಯ, ಆಸ್ಪತ್ರೆಗಳನ್ನು ಬಹಿಷ್ಕಾರ ಮಾಡುವುದು. ಮಕ್ಕಳನ್ನು ಸೇರಿಸದಿರುವುದು.
  4. ಮತಾಂತರ ತಡೆಯಲು ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಠಿಣ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕು.

ಈಗಾಗಲೇ ಶ್ರೀಲಂಕಾ, ಚೀನಾ, ಜಪಾನ ಮತ್ತು ಇಸ್ರೇಲ್ ದೇಶಗಳು ಮತಾಂತರ ನಿಷೇಧ ಕಾಯಿದೆಯನ್ನು ಅಂಗೀಕಾರ ಮಾಡಿದೆ. ಇದರಿಂದ ಪ್ರೇರಣೆ ಪಡೆದು ಭಾರತದಲ್ಲಿ ಸಹ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕು. ಅದರಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ಸನಾತನ ಧರ್ಮವು ಚಿರಾಯುವಾಗುವುದು.

ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ರಾಜ್ಯ.
ದೂ. ಕ್ರ.7204082609

Share This
300x250 AD
300x250 AD
300x250 AD
Back to top