Slide
Slide
Slide
previous arrow
next arrow

ಅತೀ ಹೆಚ್ಚು ಮಹಿಳಾ ಪೈಲಟ್’ಗಳನ್ನು ಹೊಂದಿದ ದೇಶ ಭಾರತ

300x250 AD

ನವದೆಹಲಿ: ಭಾರತದಲ್ಲಿ ಮಹಿಳಾ ಪೈಲಟ್‍ಗಳ ಪಾಲು ಶೇಕಡಾ 15 ರಷ್ಟಿದೆ, ಇದು ಅಂತರಾಷ್ಟ್ರೀಯ ಸರಾಸರಿ 5 ಶೇಕಡಾಕ್ಕಿಂತ ಹೆಚ್ಚು” ಎಂದು ಸರ್ಕಾರ ಹೇಳಿದೆ.

“ಇಜಿಸಿಎ (ಇ-ಗವರ್ನೆನ್ಸ್ ಫಾರ್ ಸಿವಿಲ್ ಏವಿಯೇಷನ್ ಮಾಹಿತಿಯ ಪ್ರಕಾರ, ಭಾರತದಲ್ಲಿ ನೋಂದಾಯಿತ 17,726 ಪೈಲಟ್‍ಗಳ ಪೈಕಿ ಮಹಿಳಾ ಪೈಲಟ್‍ಗಳ ಸಂಖ್ಯೆ 2,764 ಆಗಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕೇಂದ್ರ ರಾಜ್ಯ ಸಚಿವ ಜನರಲ್ (ನಿವೃತ್ತ) ವಿಕೆ ಸಿಂಗ್ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

300x250 AD

ದೇಶದಲ್ಲಿ ಪೈಲಟ್‍ಗಳ ತರಬೇತಿಯನ್ನು ಉತ್ತೇಜಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅದರ ಸಂಬಂಧಿತ ಸಂಸ್ಥೆಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ ಎಂದು ಸಿಂಗ್ ಹೇಳಿದರು.

“ಈ ಕ್ರಮಗಳು ಈಖಿಔಗಳಲ್ಲಿ ಹಾರಾಟದ ಸಮಯವನ್ನು ಮತ್ತು ವಾರ್ಷಿಕವಾಗಿ ನೀಡಲಾದ ವಾಣಿಜ್ಯ ಪೈಲಟ್ ಪರವಾನಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದು ಮಹಿಳಾ ಪೈಲಟ್‍ಗಳು ಸೇರಿದಂತೆ ಎಲ್ಲಾ ಮಹತ್ವಾಕಾಂಕ್ಷಿ ಪೈಲಟ್‍ಗಳಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13

Share This
300x250 AD
300x250 AD
300x250 AD
Back to top