Slide
Slide
Slide
previous arrow
next arrow

ಡಿಜಿಟಲ್ ಡಿಸ್‍ರಪ್ಟಿವ್ ಆಧಾರಿತ ಹೊಸ ಸಮವಸ್ತ್ರ ಪಡೆಯಲಿದೆ ಭಾರತೀಯ ಸೇನೆ

300x250 AD


ನವದೆಹಲಿ: ಮುಂದಿನ ವರ್ಷದಿಂದ ಭಾರತೀಯ ಸೇನೆಯ ಸಮವಸ್ತ್ರ ಬದಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸೈನಿಕರಿಗೆ ಲಘು ಹಾಗೂ ಪರಿಸರ ಸ್ನೇಹಿಯಾದ ಯುದ್ಧ ಸಮವಸ್ತ್ರವನ್ನು ಪೂರೈಸಲು ಭಾರತೀಯ ಸೇನೆ ನಿರ್ಧರಿಸಿದೆ. ಯುದ್ಧ ಭೂಮಿಯಲ್ಲಿ ಗುರುತು ಮರೆಮಾಚುವಂತೆ ಮಾಡುವುದು ಹೊಸ ಸಮವಸ್ತ್ರದ ಉದ್ದೇಶ. ಈ ಹೊಸ ಸಮವಸ್ತ್ರ ಡಿಜಿಟಲ್ ಡಿಸ್‍ರಪ್ಟಿವ್ ಆಧಾರಿತವಾಗಿರುತ್ತದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ ಜನವರಿ 15 ರಂದು ನಡೆಯುವ ಸೇನಾ ದಿನದ ಪರೇಡ್ ಸಂದರ್ಭದಲ್ಲಿ ಸಮವಸ್ತ್ರವನ್ನು ಪ್ರದರ್ಶಿಸಲಾಗುತ್ತದೆ.

300x250 AD

ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ ಮತ್ತು ಇತರ ಏಜೆನ್ಸಿಗಳ ಜೊತೆ ಮಾತುಕತೆ ನಡೆಸಿ, ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ಬಗ್ಗೆ ವಿಶ್ಲೇಷಣೆ ನಡೆಸಿ ಹೊಸ ಸಮವಸ್ತ್ರವನ್ನು ಯೋಧರಿಗಾಗಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

ಹೊಸ ಸಮವಸ್ತ್ರ ಹಗುರವಾಗಿದೆ ಮತ್ತು ಹೆಚ್ಚು ಬಾಳಿಕೆ ಬರಲಿದೆ. ಮಾತ್ರವಲ್ಲದೆ ಯೋಧರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲ ಎರಡರಲ್ಲೂ ಆರಾಮದಾಯಕತೆ ಒದಗಿಸಲಿದೆ. ಈ ಸಮವಸ್ತ್ರಗಳು ಆಲಿವ್ ಹಾಗೂ ಮಣ್ಣಿನ ಬಣ್ಣ ಹೊಂದಿರುತ್ತವೆ. ಯೋಧರು ಕಾರ್ಯನಿರ್ವಹಿಸುವ ಹವಮಾನ ಮತ್ತು ಭೂ ಪ್ರದೇಶಕ್ಕೆ ಅನುಗುಣವಾಗಿ ಸಮವಸ್ತ್ರವನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13

Share This
300x250 AD
300x250 AD
300x250 AD
Back to top