• Slide
  Slide
  Slide
  previous arrow
  next arrow
 • ಬಾಲಕಿ ಶ್ರೀಲಕ್ಷ್ಮೀ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ; ಪ್ರಮುಖರಿಂದ ಸನ್ಮಾನ

  300x250 AD


  ಅಂಕೋಲಾ: ಸೂಕ್ತ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ಸಂಭವನೀಯ ಅವಘಡವನ್ನು ತಪ್ಪಿಸಿದ ಬಾಲಕಿ ಪಿ.ಎಂ.ಹೈಸ್ಕೂಲಿನ 8ನೇ ತರಗತಿಯ ವಿದ್ಯಾರ್ಥಿನಿ ಕನಸೆಗದ್ದೆಯ ಶ್ರೀಲಕ್ಷ್ಮೀ ನಾಗರಾಜ ಜಾಂಬಳೇಕರರನ್ನು ತಾಲೂಕಿನ ಪ್ರಮುಖರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು.

  ಈ ಸಂದರ್ಭದಲ್ಲಿ ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ ವಿದ್ಯುತ್ ಶಾರ್ಟ ಸರ್ಕೀಟನಿಂದ ಬೆಂಕಿ ಅವಘಡ ಸಂಭವಿಸಿದಾಗ ಮನೆಯಲ್ಲಿನ ಹಿರಿಯರಿಗೆ ನೀರು ಹಾಕದಂತೆ ತಡೆದು ಸ್ವತಃ ತಾನೇ ಮೇಲೆ ಹತ್ತಿ ಮೇನ್ ಸ್ವಿಚ್ ಆಫ್ ಮಾಡಿ ಆಗುವ ಅನಾಹುತವನ್ನು ತಪ್ಪಿಸಿದ್ದಾಳೆ ಎಂದರು. ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಅನಿರೀಕ್ಷಿತವಾಗಿ ಆಗುವ ತೊಂದರೆಗಳನ್ನು ಜಾಣ್ಮೆಯಿಂದ ನಿವಾರಿಸಿದಾಗ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

  300x250 AD

  ಡೊಂಗ್ರಿ ಗ್ರಾ.ಪಂ.ಪಿ.ಡಿ.ಓ ಗಿರೀಶ ನಾಯಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಈ ರೀತಿಯ ಕ್ರಿಯಾಶೀಲತೆ ಇರಬೇಕು, ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು. ಎಂದರು. ನ್ಯಾಯವಾದಿ ವಿನೋದ ಶಾನಭಾಗ ಸ್ವಾಗತಿಸಿದರು. ಪತ್ರಕರ್ತ ಸುಭಾಶ ಕಾರೇಬೈಲ್ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ನಾಗಾನಂದ ಬಂಟ ನಿರ್ವಹಿಸಿದರು. ಸುರೇಶ ನಾಯ್ಕ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top