• Slide
    Slide
    Slide
    previous arrow
    next arrow
  • KSRTC ಬಸ್ ನಲ್ಲಿ ಇನ್ಮುಂದೆ ಜೋರಾಗಿ ಹಾಡು ಕೇಳುವಂತಿಲ್ಲ, ವಿಡಿಯೋ ನೋಡುವಂತಿಲ್ಲ

    300x250 AD


    ಬೆಂಗಳೂರು: ಇನ್ನು ಮುಂದೆ ನೀವು ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಲೌಡ್ ಸ್ಪೀಕರ್ ನಲ್ಲಿ ಹಾಡನ್ನು ಕೇಳುವಂತಿಲ್ಲ, ವಿಡಿಯೋ ನೋಡುವಂತಿಲ್ಲ. ಒಂದು ವೇಳೆ ಹಾಡು ಕೇಳಲೇ ಬೇಕು ವಿಡಿಯೋ ನೋಡಲೇಬೇಕು ಎಂದರೆ ಇಯರ್ ಫೋನ್ ಬಳಸಬೇಕು ಎಂದು ರಾಜ್ಯ ಹೈಕೋರ್ಟ್ ಹೊಸ ಆದೇಶವೊಂದನ್ನು ಜಾರಿಗೆ ತಂದಿದೆ.

    ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಜೋರಾಗಿ ಮೊಬೈಲ್‌ನಲ್ಲಿ ಹಾಡನ್ನು ಕೇಳಲು ಅವಕಾಶವನ್ನು ನಿರಾಕರಿಸಲಾಗಿದೆ. ಏಕೆಂದರೆ ಈ ರೀತಿಯಲ್ಲಿ ಜೋರಾಗಿ ಹಾಡು ಹಚ್ಚುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಹಾಗಾಗಿ ಇತರರಿಗೆ ತೊಂದರೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಹೈಕೋರ್ಟ್‌ನ ಈ ಆದೇಶ ನೀಡಿದೆ.

    300x250 AD

    ಈ ಹಿಂದೆ ನ್ಯಾಯಾಲಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿರ್ಬಂಧ ಹೇರುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಯಾರಾದರೂ ಜೋರಾದ ಧ್ವನಿಯಲ್ಲಿ ಹಾಡನ್ನು ಕೇಳುವುದು ಅಥವಾ ವಿಡಿಯೋಗಳನ್ನು ನೋಡುತ್ತಿದ್ದರೆ ಕೂಡಲೇ ಅವರಿಗೆ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ಪ್ರಯಾಣಿಕ ಮಾತಿಗೆ ಬಗ್ಗದೇ ಇದ್ದಲ್ಲಿ ಅಂತವರನ್ನು ಬಸ್ ನಿಂದ ಕೆಳಗೆ ಇಳಿಸಬಹುದಾಗಿದೆ ಎಂದು ಹೈಕೋರ್ಟ್ ಹೇಳಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top