ಶಿರಸಿ: ಕೃಷಿಕರ ಪಾಲಿನ ದೊಡ್ಡ ಹಬ್ಬವಾದ ದೀಪಾವಳಿ ಅಂಗವಾಗಿ ಹುಲಿ ದೇವರಿಗೆ ಪೂಜೆ ನಡೆಸಲಾಯಿತು.
ಶುಕ್ರವಾರ ಕೃಷಿಕರು ತಮ್ಮ ಮನೆಯ ಜಾನುವಾರುಗಳಿಗೆ ಒಳಿತಾಗಲೆಂದು ಊರ ಹೊರ ಭಾಗದಲ್ಲಿ ಸ್ಥಾಪಿಸಿರುವ ಹುಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಬಸವನ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಈ ಆಚರಣೆ ಮಲೆನಾಡ ಭಾಗದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದ್ದು, ದೀಪಾವಳಿ ಹಬ್ಬದ ದಿನದಂದು ಈ ಆಚರಣೆ ಮಾಡಲಾಗುತ್ತದೆ.