• Slide
    Slide
    Slide
    previous arrow
    next arrow
  • ಜಿಎಸ್‍ಟಿ ಪರಿಹಾರಕ್ಕೆ ಕೇಂದ್ರದಿಂದ 44 ಸಾವಿರ ಕೋಟಿ ರೂ.ಬಿಡುಗಡೆ

    300x250 AD


    ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಇಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್‍ಟಿ ಪರಿಹಾರದ ಬದಲಾಗಿ ಬ್ಯಾಕ್-ಟು-ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ 44 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

    ಈ ಹಿಂದೆ ಬಿಡುಗಡೆಯಾದ 1,15,000 ಕೋಟಿ ರೂಪಾಯಿಗಳನ್ನು ಗಣನೆಗೆ ತೆಗೆದುಕೊಂಡರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ ಒಟ್ಟು ಮೊತ್ತವು 1,59,000 ಕೋಟಿ ರೂಪಾಯಿಗಳಾಗಿದೆ. ಇದು ನಿಜವಾದ ಸೆಸ್ ಸಂಗ್ರಹದಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್‍ಟಿ ಪರಿಹಾರಕ್ಕೆ ಹೆಚ್ಚುವರಿಯಾಗಿದೆ ಎಂದು ಸಚಿವಾಲಯ ಹೇಳಿದೆ.

    300x250 AD

    ಬ್ಯಾಂಕ್ ಟು ಬ್ಯಾಕ್ ಸಾಲ ಸೌಲಭ್ಯದಡಿ ಕರ್ನಾಟಕಕ್ಕೆ 5010.90 ಕೋಟಿ ರೂಪಾಯಿ ಕೇಂದ್ರದಿಂದ ಬಂದಿದೆ. ಈ ಮೊತ್ತವು ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುವ ಸಾಮಾನ್ಯ ಜಿಎಸ್‍ಟಿ ಪರಿಹಾರದೊಂದಿಗೆ ಪಾವತಿಸಿದ ಹೆಚ್ಚುವರಿ ಮೊತ್ತವಾಗಿದೆ. ಸಂಪನ್ಮೂಲದ ಅಂತರವನ್ನು ಸರಿದೂಗಿಸಲು ಕೇಂದ್ರ ಸರಕಾರವು 1.59 ಲಕ್ಷ ಕೋಟಿ ರೂ.ಸಾಲ ಪಡೆದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬ್ಯಾಂಕ್ ಟು ಬ್ಯಾಕ್ ಸಾಲ ಸೌಲಭ್ಯದ ಆಧಾರದ ಮೇಲೆ ಇದನ್ನು ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ ನಡೆದ 43ನೇ ಜಿಎಸ್‍ಟಿ ಮಂಡಳಿ ಸಭೆಯ ಈ ಕುರಿತು ನಿರ್ಧಾರ ಕೈಗೊಳ್ಳಾಗಿದೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top