• Slide
    Slide
    Slide
    previous arrow
    next arrow
  • ನ.30ರವರೆಗೆ ಕೋವಿಡ್-19 ನಿರ್ಬಂಧ ವಿಸ್ತರಣೆ

    300x250 AD

    ನವದೆಹಲಿ: ದೇಶದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳು ಕಡಿಮೆಯಾಗಿದೆಯಾದರೂ ಆತಂಕ ಇನ್ನೂ ದೂರವಾಗಿಲ್ಲ. ಯಾವಾಗ ಬೇಕಾದರೂ ಸಾಂಕ್ರಾಮಿಕ ಮತ್ತೆ ಸ್ಫೋಟಗೊಳ್ಳುವ ಆತಂಕ ಇದ್ದೇ ಇದೆ. ಹೀಗಾಗಿ ಕೋವಿಡ್-19 ನಿರ್ಬಂಧಗಳನ್ನು ನವೆಂಬರ್ ತಿಂಗಳ 30 ರವರೆಗೆ ವಿಸ್ತರಣೆ ಮಾಡಲಾಗಿದೆ.

    ಕೇಂದ್ರ ಗೃಹ ಸಚಿವಾಲಯವು ಸಾಂಕ್ರಾಮಿಕ ರೋಗವು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಈ ವರ್ಷದ ನವೆಂಬರ್ 30 ರವರೆಗೆ ದೇಶಾದ್ಯಂತ ಕೋವಿಡ್-19 ನಿರ್ಬಂಧಗಳನ್ನು ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆ ಎಂಬ ಐದು ಕಾರ್ಯತಂತ್ರದ ಮೇಲೆ ಗಮನ ಕೇಂದ್ರೀಕರಿಸಲು ಕೇಳಿಕೊಂಡಿತ್ತು.

    300x250 AD

    ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುವ ಯಾವುದೇ ಸಾಧ್ಯತೆಯನ್ನು ತಪ್ಪಿಸಲು, ಸಾಮೂಹಿಕ ಕೂಟಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top