ಶಿರಸಿ: ಸದಸ್ಯರ ಅನುಕೂಲಕ್ಕಾಗಿ ವಿನೂತನ ಸೇವೆಗಳನ್ನು ನೀಡುತ್ತಿರುವ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಕಿರಾಣಿ ಸುಪರ್ ಮಾರ್ಕೆಟ್‍ನ ಕೃಷಿ ವಿಭಾಗದಲ್ಲಿ ದೀಪಾವಳಿ ಪ್ರಯುಕ್ತವಾಗಿ ಸಂಘದ ರೈತ ಸದಸ್ಯ ಗ್ರಾಹಕರಿಗೆ ಮಾತ್ರ ಹಣತೆ ಹಾಗೂ ದಾಬುಗಳನ್ನು ಉಚಿತ ಕೊಡುಗೆಯಾಗಿ ನೀಡಲಾಗುತ್ತಿದೆ. ಸದಸ್ಯರಿಗೆ ದೀಪಾವಳಿಯ ಶುಭಾಶಯ ಹೇಳುವುದರ ಜೊತೆಗೆ ಹಣತೆ ಹಾಗೂ ದಾಬುಗಳನ್ನು ನೀಡುವುದರ ಮೂಲಕ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಎಸ್. ಹೆಗಡೆ ಕಡವೆ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ದೀಪಾವಳಿ ಪ್ರಯುಕ್ತ TSSನಿಂದ ಉಚಿತ ದಾಬು-ಹಣತೆ ಕೊಡುಗೆ
