ನವದೆಹಲಿ: ಇದುವರೆಗೆ 87.25 ಕೋಟಿಗೂ ಅಧಿಕ ಕೋವಿಡ್ -19 ಲಸಿಕೆ ಡೋಸ್ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರದ ವತಿಯಿಂದ ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
5 ಕೋಟಿಗೂ ಅಧಿಕ ಕೋವಿಡ್ -19 ಲಸಿಕೆ ಡೋಸ್ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಲಭ್ಯವಿವೆ ಎಂದು ಅದು ಹೇಳಿದೆ.
ಆರೋಗ್ಯ ಸಚಿವಾಲಯವು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಇದುವರೆಗೆ ಕೇಂದ್ರ ಸರ್ಕಾರವು 87.25 ಕೋಟಿ (87,25,58,985) ಕೋವಿಡ್ ಲಸಿಕೆ ಡೋಸ್ ಅನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರದ ಮೂಲಕ (ಉಚಿತ ಚಾನೆಲ್) ಮತ್ತು ನೇರ ರಾಜ್ಯ ಸಂಗ್ರಹಣೆಯ ಮೂಲಕ ನೀಡಿದೆ ಎಂದು ಹೇಳಿದೆ.
5 ಕೋಟಿಗೂ ಅಧಿಕ ಬಾಕಿ ಮತ್ತು ಬಳಕೆಯಾಗದ ಕೋವಿಡ್ -19 ಲಸಿಕೆ ಡೋಸ್ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಇನ್ನೂ ಲಭ್ಯವಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.