Slide
Slide
Slide
previous arrow
next arrow

ಪಂಜಾಬ್ ವಲಯದಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ನಿಯೋಜನೆ

300x250 AD


ನವದೆಹಲಿ: ಪಾಕಿಸ್ಥಾನ ಮತ್ತು ಚೀನಾದ ವೈಮಾನಿಕ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಭಾರತೀಯ ವಾಯುಸೇನೆಯ ಪಂಜಾಬ್ ವಲಯದಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಮೊದಲ ಸ್ಕ್ವಾಡ್ರನ್ ಅನ್ನು ನಿಯೋಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

`ಮೊದಲ ಸ್ಕ್ವಾಡ್ರನ್ ಅನ್ನು ಪಂಜಾಬ್ ವಲಯದಲ್ಲಿ ನಿಯೋಜಿಸಲಾಗುತ್ತಿದೆ. ಮೊದಲ ಸ್ಕ್ವಾಡ್ರನ್ ಪಾಕಿಸ್ಥಾನ ಮತ್ತು ಚೀನಾ ಎರಡರಿಂದಲೂ ವೈಮಾನಿಕ ಬೆದರಿಕೆಗಳನ್ನು ನಿಭಾಯಿಸಲು ಸಮರ್ಥವಾಗಿರುತ್ತವೆ’ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.

ಕ್ಷಿಪಣಿ ವ್ಯವಸ್ಥೆಯ ಹಲವಾರು ಭಾಗಗಳು ಡಿಸೆಂಬರ್ ಆರಂಭದಲ್ಲಿ ಭಾರತವನ್ನು ತಲುಪಿವೆ. ಮುಂದಿನ ಕೆಲವು ವಾರಗಳಲ್ಲಿ ಸಂಪೂರ್ಣ ಘಟಕವು ಕಾರ್ಯನಿರ್ವಹಿಸಲಿದೆ.

300x250 AD

ರಕ್ಷಣಾ ವ್ಯವಸ್ಥೆಯ ಉಪಕರಣಗಳನ್ನು ದೇಶಕ್ಕೆ ತರಲು ಸಮುದ್ರ ಮತ್ತು ವಾಯು ಮಾರ್ಗಗಳೆರಡನ್ನೂ ಬಳಸಲಾಗುತ್ತಿದೆ.

ರಷ್ಯಾದೊಂದಿಗೆ ಸಹಿ ಹಾಕಿರುವ 35,000 ಕೋಟಿ ರೂ.ಗಳ ಒಪ್ಪಂದದ ಮೂಲಕ ಭಾರತ ಸ್ವಾಧೀನಪಡಿಸಿಕೊಳ್ಳಲಿರುವ ಐದು ಸ್ಕ್ವಾಡ್ರನ್‍ಗಳು 400 ಕಿ.ಮೀ.ವರೆಗಿನ ವೈಮಾನಿಕ ಬೆದರಿಕೆಗಳನ್ನು ನಿಭಾಯಿಸಬಲ್ಲವು. ಐಎಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗಾಗಲೇ ಈ ವ್ಯವಸ್ಥೆಯನ್ನು ಬಳಸಿಕೊಳ್ಳುವ ಕುರಿತು ರಷ್ಯಾದಲ್ಲಿ ತರಬೇತಿ ಪಡೆದಿದ್ದಾರೆ.
ನ್ಯೂಸ್ 13

Share This
300x250 AD
300x250 AD
300x250 AD
Back to top