Slide
Slide
Slide
previous arrow
next arrow

1,17,335 ಗೃಹಲಕ್ಷ್ಮಿಯರಿಗೆ ತಲಾ 2 ಸಾವಿರ: ಗಂಗೂಬಾಯಿ ಮಾನಕರ್

300x250 AD

ಕಾರವಾರ: ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ.2000ದಂತೆ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಾಗಿರುವ ಯಜಮಾನಿ ಅಥವಾ ಯಜಮಾನ, ಆದಾಯ ತೆರಿಗೆ ಪಾವತಿಸದೇ ಇರುವ ಅಥವಾ ಜಿಎಸ್‌ಟಿ ರಿಟರ್ನ್ಸ್ ಮಾಡದೇ ಇರುವ ಕುಟುಂಬದ ಓರ್ವ ಮಹಿಳೆ ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವ ಮಹಿಳೆಯರು ತಮ್ಮ ಅರ್ಜಿಯನ್ನು ನೊಂದಾಯಿಸಿಕೊಳ್ಳಲು ಜಿಲ್ಲೆಯ 207 ಗ್ರಾಮಒನ್, 229 ಬಾಪೂಜಿ, 21 ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ 31 ಸ್ಥಳೀಯ ನಗರ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ 7,10,913 ಮಹಿಳೆಯರು ಇದ್ದು, ಅವರಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು 3,46,835 ಮಹಿಳೆಯರು ಅರ್ಹರಿರುವರೆಂದು ಗುರುತಿಸಲಾಗಿದೆ. ಅರ್ಹರೆಂದು ಗುರುತಿಸಿದ ಮಹಿಳೆಯರಲ್ಲಿ ಈ ವರೆಗೆ 2,96,145 ಮಹಿಳೆಯರು ಯೋಜನೆಗೆ ಅಧಿಕೃತವಾಗಿ ನೋಂದಾಯಿಸುವುದರ ಮೂಲಕ ಶೇ. 85.38ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಜಿಲ್ಲೆಯು ಈ ಯೋಜನೆಯ ಪ್ರಗತಿಯಲ್ಲಿ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನದಲ್ಲಿದ್ದು, ಸೆ.30ರಂದು ಯೋಜನೆಯು ಅಧಿಕೃತವಾಗಿ ಉದ್ಘಾಟನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಂದು ಜಿಲ್ಲಾ ಮಟ್ಟದ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ಕಲ್ಯಾಣ ಮಂಟಪದಲ್ಲಿ, ತಾಲೂಕು ಮಟ್ಟದಲ್ಲಿ ಸ್ಥಳೀಯ ನಗರ ಸಂಸ್ಥೆಗಳಲ್ಲಿಯೂ ಹಾಗೂ ಗ್ರಾಮ ಮಟ್ಟದಲ್ಲಿ 229 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ. ಜೊತೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ ನೇರಪ್ರಸಾರ ಬಿತ್ತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಗೆ ಈ ಯೋಜನೆಯಡಿಯಲ್ಲಿ ಒಟ್ಟು ರೂ.58,02,48,000 ಅನುದಾನ ಬಿಡುಗಡೆಯಾಗಿದೆ. ಈ ಬಿಡುಗಡೆಯಾದ ಅನುದಾನದಲ್ಲಿ ಎನ್‌ಪಿಸಿಐಯಿಂದ ಪರಿಶೀಲಿಸಿ ಅರ್ಹರೆಂದು ಬಂದಿರುವ ಒಟ್ಟು 1,17,335 ಫಲಾನುಭವಿಗಳಿಗೆ ತಲಾ ರೂ.2000ದಂತೆ ಒಟ್ಟು ರೂ.23,46,70,000 ಧನಸಹಾಯವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹರಿರುವ ಎಲ್ಲ ಯಜಮಾನಿ ಮಹಿಳೆಯರಿಗೆ ಧನಸಹಾಯ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

300x250 AD

ಆ.30ರಂದು ಜಿಲ್ಲಾ ಮಟ್ಟದಲ್ಲಿ ಬೆಳಗ್ಗೆ 10 ಗಂಟೆಯಿoದ ಜಿಲ್ಲಾ ರಂಗಮoದಿರದಿoದ ಪೊಲೀಸ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡಯಲಿದ್ದು, ತಾಲ್ಲೂಕಾ ಮಟ್ಟದಲ್ಲಿ ಹಾಗೂ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top