• Slide
    Slide
    Slide
    previous arrow
    next arrow
  • ನಾಡು ನುಡಿಗೆ ವಚನಗಳ ಕೊಡುಗೆ: ಹುಲೇಕಲ್ ಕಾಲೇಜಿನಲ್ಲಿ ಉಪನ್ಯಾಸ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ಲಿನ ಶ್ರೀದೇವಿ ಪದವಿ ಪೂರ್ವ ಕಾಲೇಜಿನ 2023-24 ನೇ ಶೈಕ್ಷಣಿಕ ವರ್ಷದ ಶೈಕ್ಷಣಿಕ ಸಹ ಪಠ್ಯಚಟುವಟಿಕೆ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ “ ನಾಡು ನುಡಿಗೆ ವಚನ ಸಾಹಿತ್ಯದ ಕೊಡುಗೆ” ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀದೇವಿ ಭವನದಲ್ಲಿ ನಡೆಸಲಾಯಿತು.

    ಆಸೆಮ್ಸ್ ಶಿಕ್ಷಣ ಸಂಸ್ಥೆ, ಕಲ್ಮಾಡಿಯ ಪ್ರಾಂಶುಪಾಲ, ಪ್ರಸಂಗ ಕರ್ತ, ಅರ್ಥಧಾರಿ ಪ್ರೋ ಪವನ ಕಿರಣಕೆರೆ ಇವರು ಉಪನ್ಯಾಸವನ್ನು ನಡೆಸಿಕೊಡುತ್ತಾ, 12 ನೇ ಶತಮಾನದ ವಚನಕಾರರ ವಿಚಾರವನ್ನು ವಿವರಿಸುತ್ತಾ, ಸಮಾಜದ ಉದ್ಧಾರ, ಸಂಸಾರದ ಉದ್ಧಾರ, ಆತ್ಮೋದ್ಧಾರ ಈ ಮೂರು ಆಯಾಮಗಳನ್ನು ಪ್ರಬಲವಾಗಿ ಸಾರಿದ ಸಂಗತಿಗಳು ವಚನದಲ್ಲಿ ಮುಖ್ಯವಾಗಿ ಕಾಣಸಿಗುತ್ತವೆ ಎಂದರು. ಹಾಗೆಯೆ ಸಾಮಾಜಿಕ ಸಮಾನತೆಗೆ ವಚನಕಾರರು ನೀಡಿದ ಕೊಡುಗೆಯ ವಿಚಾರವನ್ನು ಉದಾಹರಣೆಯ ಮೂಲಕವಾಗಿ ವಿವರಿಸಿದರು. ಸಂಗೀತ ಶಿಕ್ಷಕಿ, ಶ್ರೀಮತಿ ಸುಮಾ ಹೆಗಡೆ ವಚನ ಗಾಯನವನ್ನು ಸುಮಧುರವಾಗಿ ಹಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆ, ಹುಲೇಕಲ್ ಕಾರ್ಯಾಧ್ಯಕ್ಷ ಎಂ. ಎನ್. ಹೆಗಡೆ ವಹಿಸಿದ್ದರು, ಸಂಸ್ಥೆಯ ಪ್ರಾಚಾರ್ಯ ಡಿ. ಆರ್. ಹೆಗಡೆ ಸರ್ವರನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ಎಂ. ವಿ. ಹೆಗಡೆ ಆಮಂತ್ರಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶಾಂತಾರಾಮ ಹೆಗಡೆ, ಸದಸ್ಯರುಗಳಾದ ಜಿ. ಟಿ. ಭಟ್ಟ, ಹಾಗೂ ಜಿ. ಎಸ್. ಹೆಗಡೆ ಹಾಗೂ ಮುಖ್ಯ ಶಿಕ್ಷಕರಾದ ಜಿ ಎ. ಬಂಟ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀಮತಿ ಪ್ರತಿಭಾ ಕರ್ಜಗಿ ಸರ್ವರನ್ನು ವಂದಿಸಿದರು, ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top