ಸುವಿಚಾರ

​ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಷೇವತೇ 

ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಹಿ ||

ಯಾರು ಸ್ಥಿರವಾದುದನ್ನು ತೊರೆದು ಅಸ್ಥಿರವಾದುದಕ್ಕೆ ಆತುಕೊಳ್ಳುವರೋ ಅವರ ಪಾಲಿಗೆ ಗಟ್ಟಿಯಾದ ಆಧಾರವೇ ಇಲ್ಲದಂತೆ ಆಗುತ್ತದೆ. ಅಸ್ಥಿರವಾದದ್ದು ಹೇಗಿದ್ದರೂ ನಾಶವಾಗುವುದೇ ಆಗಿದೆ. ಈ ಜನರ ಪಾಲಿಗೆ ಧ್ರುವವಾದ್ದೂ ನಾಶವಾಗುತ್ತದೆ. ಇರುವ ನೆಲವನ್ನೆಲ್ಲ ಮಾರಿ ದುಡ್ಡು ಮಾಡಿಕೊಂಡು ಪೇಟೆಗೆ ಹೋಗಿ ಬದುಕುವ ಕನಸಿನ ಜನಕ್ಕೆ ಈ ಮಾತು ಹೇಳಿ ಮಾಡಿಸಿದಂತಿದೆ. ನೆಲವನ್ನು ಮಾರಿದ ದುಡ್ಡಿನಲ್ಲಿ ಜೀವನವೆಲ್ಲ ಬದುಕುವೆನೆಂಬುದು ಹಾಸ್ಯಾಸ್ಪದವಷ್ಟೆ. ಹಣ ಬಹಳ ದಿನ ಬಾರದು, ಅದು ಅಸ್ಥಿರವಾದ್ದು. ನೆಲವಾದರೋ ಸ್ಥಿರವಾದ್ದು. ನೆಲ ಕಳೆದುಕೊಂಡವನ ಪಾಲಿಗೆ ನೆಲವೂ ಹಣವೂ ನಷ್ಟವಾಗುತ್ತವೆ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.