Slide
Slide
Slide
previous arrow
next arrow

ಲಯನ್ಸ್ ಪ್ರೌಢಶಾಲೆಯಲ್ಲಿ ವಾರ್ಷಿಕ ದತ್ತಿ ನಿಧಿ, ಪ್ರತಿಭಾ ಪುರಸ್ಕಾರ ಸಮಾರಂಭ

ಶಿರಸಿ: ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ದತ್ತಿ ನಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿ., ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.. ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವ ಈ ಸಮಾರಂಭವು, ಶಾಲೆಯ ಸಂಗೀತ ಶಿಕ್ಷಕಿ…

Read More

ದಾಂಡೇಲಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ದಾಂಡೇಲಿ : ನಗರದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಾಲಯದ ಮುಂಭಾಗದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್. ಹೆಗಡೆ, ಈ ದೇಶದಲ್ಲಿ ತನ್ನದೆ ಆದ ಘನ‌…

Read More

ಸತತವಾದ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯ: ಎಲ್. ಬಸವರಾಜು

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಸಭಾಭವನದಲ್ಲಿ ಗುರುವಾರ ಡಿಡಿಪಿಐ ಕಾರ್ಯಾಲಯ, ಡಾ. ಎಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಮತ್ತು ಅಪರ ಆಯುಕ್ತರ ಕಚೇರಿ ಧಾರವಾಡ ಇವರ ಸಯುಕ್ತ ಆಶ್ರಯದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಲಯ…

Read More

ಅರಬೈಲ್ ಘಾಟ್’ನಲ್ಲಿ ಲಾರಿ ಪಲ್ಟಿ

ಯಲ್ಲಾಪುರ: ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಪಲ್ಟಿ ಬಿದ್ದಿದೆ.ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಸಿಮೆಂಟ್ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದಿದೆ. ಲಾರಿ…

Read More

ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗದು: ಡಾ.ಎಸ್.ಡಿ. ಹೆಗಡೆ

ಕಾಂಗ್ರೆಸ್ ಮುಕ್ತ ಭಾರತ ಮೋದಿ ಕನಸು ನನಸಾಗದು: ಡಾ.ಎಸ್.ಡಿ.ಹೆಗಡೆ

ಹೊನ್ನಾವರ: ತ್ಯಾಗ ಮತ್ತು ಬಲಿದಾನಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಇಂತಹ ನೂರಾರು ವರ್ಷಗಳ ಭವ್ಯ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಅಳಿಸಲು ಮೋದಿ ಹತ್ತು ಜನ್ಮ ಹುಟ್ಟಿ ಬಂದರು ಸಾಧ್ಯವಿಲ್ಲದ ಮಾತಾಗಿದ್ದೂ, ಕಾಂಗ್ರೆಸ್ ಮುಕ್ತ ಭಾರತ ಅನ್ನುವ ದೇಶದ ಪ್ರಧಾನಿ ಮೋದಿಯ ಕನಸು ಕನಸಾಗಿಯೇ ಉಳಿಯಲಿದೆ ಎಂದು ಖ್ಯಾತ ಸಾಹಿತಿ ಡಾ. ಎಸ್.ಡಿ.ಹೆಗಡೆ ನುಡಿದರು.

ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ, ಸೇರಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇವಲ ೭೫ ಸದಸ್ಯರಿಂದ ಎ.ಓ.ಹ್ಯೂಮ್ ಅಧ್ಯಕ್ಷತೆಯಲ್ಲಿ ೧೮೮೫ ಸ್ಥಾಪಿತವಾದ ಕಾಂಗ್ರೆಸ್ ಇಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ರತ್ವದಲ್ಲಿ ಕೋಟ್ಯಾಂತರ ಸದಸ್ಯರನ್ನು ಹೊಂದಿದ್ದು, ದೇಶದ ಬಡವರ ಪಾಲಿಗೆ ಬೆಳಕಾಗಿ ನಿಂತಿದೆ ಎಂದರು. ಕಾಂಗ್ರೆಸ್ ಹುಟ್ಟಿದ್ದೇ ಸ್ಥಾಪಿತ ಶಕ್ತಿಗಳ ವಿರುದ್ಧ ಹೋರಾಡಲು ಎನ್ನುವ ಸತ್ಯ ಜಗತ್ತಿಗೆ ಗೊತ್ತಿದೆ. ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಕಾಂಗ್ರೆಸ್ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ ಎಂದರು. ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ನೇತ್ರತ್ವದಲ್ಲಿ ಹಸಿರು ಕ್ರಾಂತಿಯ ಮೂಲಕ,ದೇಶವನ್ನು ಹಸಿವು ಮುಕ್ತ ಭಾರತ ಮಾಡಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೆಮ್ಮೆಯಿಂದ ನುಡಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಆಚರಿಸಲು ನಮಗೆಲ್ಲಾ ಹೆಮ್ಮೆಯಾಗುತ್ತಿದ್ದು, ಇಂತಹ ಪಕ್ಷದಲ್ಲಿ ಕಾರ್ಯಕರ್ತನಾಗಿ ಬಡವರ ಸೇವೆ ಮಾಡಲು ಸಂತೋಷವಾಗುತ್ತಿದೆ ಎಂದರು. ಇಂದು ಭಾರತ ಪ್ರಪಂಚದ ಮುಂದುವರಿದ ರಾಷ್ರದ ಸಾಲಿನಲ್ಲಿ ಬಂದು ನಿಂತಿದ್ದರೇ ಅದು ಕಾಂಗ್ರೆಸ್ ಪಕ್ಷದ ನಾಯಕರ ಕೊಡುಗೆ ಎಂದರು. ಸೂರ್ಯ-ಚಂದ್ರ ಇರುವವರೆಗೂ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲಾ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ ಮಾತನಾಡಿ ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.ಇವತ್ತು ದೇಶದ ದುರ್ಬಲ ವರ್ಗದವರು ಮತ್ತು ಸಮಾಜದ ಎಲ್ಲಾ ವರ್ಗದ ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದರೇ ಅದು ಕಾಂಗ್ರೆಸ್ ಜಾರಿಗೆ ತಂದ ಉಳುವವನೇ ಹೊಲದ ಒಡೆಯ ಅನ್ನುವ ಕಾನೂನಿನ ಮೂಲಕ ಎಂದರು.

ಹೊನ್ನಾವರ ಬಿಸಿಸಿ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ ಮಾತನಾಡಿ ಸಮಾಜದ ಎಲ್ಲಾ ವರ್ಗದವರನ್ನು ಸಮನಾಗಿ ಕೊಂಡೊಯ್ಯುವ ಶಕ್ತಿ ಇರುವುದೇ ಕಾಂಗ್ರೆಸ್ ಸಿದ್ದಾಂತದಲ್ಲಿ ಎಂದರು. ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಲಕ್ಷ್ಮಿ ಗೊಂಡಾ, ಶ್ರೀಮತಿ ಆಶಾ ಮಡಿವಾಳ, ಸುರೇಶ ಮೇಸ್ತಾ, ಕೆ.ಎಮ್. ನಾಯ್ಕ, ಶ್ರೀಕಾಂತ್ ಮೇಸ್ತ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನಡೆಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಇಂಟೆಕ್ ಕಾರ್ಯದರ್ಶಿ ಕೇಶವ ಮೇಸ್ತ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯ ಶೇಖ, ಇಂಟೆಕ್ ಅಧ್ಯಕ್ಷ ಆಗ್ನೆಲ್ ಡಯಾಸ ಉಪಸ್ಥಿತರಿದ್ದರು.
ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ ವಂದಿಸಿದರು.

Read More

ಜುಲಿಯಾನ ಪೆದ್ರು ಫರ್ನಾಂಡಿಸ್ ಸಿದ್ದಿಗೆ ರಾಜ್ಯ ಮಟ್ಟದ ಕೊರವಂಜಿ ಪ್ರಶಸ್ತಿಯ ಗರಿ

ಹಳಿಯಾಳ : ಸಿದ್ದಿ ಬುಡಕಟ್ಟು ಸಮುದಾಯದ ಖ್ಯಾತ ಕಲಾವಿದೆ, ಸಮಾಜ ಸೇವಕಿ, ಸಿದ್ದಿ ಕಲಾ ತಂಡದ ಪ್ರವರ್ತಕಿ, ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಬಹುಮುಖ ವ್ಯಕ್ತಿತ್ವದ ಸಾಧಕಿ ಮತ್ತು…

Read More

ದತ್ತಗುರು ಭಜನಾ ಮಂಡಳಿ ಸದಸ್ಯರಿಗೆ ಸನ್ಮಾನ

ಅಂಕೋಲಾ: ತಾಲೂಕಿನ ಬೇಲೇಕೇರಿಯ ದತ್ತಗುರು ಭಜನಾ ಮಂಡಳಿಯನ್ನು ಅಂದಿನಿಂದ ಇಂದಿನವರೆಗೂ ವಾರದಲ್ಲಿ ಎರಡು ದಿನ‌ ಗುರುವಾರ ಮತ್ತು ಶನಿವಾರ ಶ್ರೀ ದತ್ತಾತ್ರೇಯ ‌ದೇವಸ್ಥಾನದಲ್ಲಿ‌ ದೇವರ ಭಜನೆಯನ್ನು ಮಾಡಿಕೊಂಡು ಬಂದಿರುವ ಕಾರಣಕ್ಕಾಗಿ ಭಜನಾ ಮಂಡಳಿಯ ಸದಸ್ಯರ ಸೇವೆಯನ್ನು ಗುರುತಿಸಿ ಶ್ರೀ…

Read More

ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಜ.2ರಂದು ಶಿಕ್ಷೆ ಪ್ರಕಟ: ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೋ? ಮರಣದಂಡನೆಯೋ?

ಅಂಕೋಲಾ: ತಾಲೂಕಿನ ಮೊಗಟಾ ಗ್ರಾಪಂ ಆಂದ್ಲೆಯಲ್ಲಿ ಡಿಸೆಂಬರ್ 19, 2019ರಂದು ಜಿಲ್ಲೆಯೇ ತಲ್ಲಣಗೊಳ್ಳುವಂತ ಕೃತ್ಯ ಒಂದು ನಡೆದು ಹೋಗಿತ್ತು.ಅಮಾಯಕ ಜೀವಗಳೆರಡು ಕ್ರೂರಿಗಳಿಂದ ಭಯಾನಕವಾಗಿ ಹತ್ಯೆಯಾಗಿದ್ದರು. ಆರೋಪಿಗಳನ್ನು ಪತ್ಯೆ ಹಚ್ಚಿ ಕಾರಾಗೃಹದಲ್ಲಿಟ್ಟು ಕಳೆದ 4 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು…

Read More

ಬೇಳಾ ಬಂದರ ಶಾಲೆ ಅಮೃತ ಮಹೋತ್ಸವ: ಗುರುವಂದನೆ, ಸಾಧಕರಿಗೆ ಸನ್ಮಾನ

ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಳಾ ಬಂದರ ಇದರ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಂದನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು. ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಇದೇ ಶಾಲೆಯಲ್ಲಿ ಈ ಹಿಂದೆ…

Read More

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್…

Read More
Back to top