ಶಿರಸಿ: ದೇಶಕ್ಕೆ ಒಳ್ಳೆಯದಾಗಿ, ಸೈನಿಕರಿಗೆ ಹೋರಾಡಲು ಶಕ್ತಿ ನೀಡುವಂತೆ ಇಂದು ಗೋಳಿ ಸಿದ್ದಿವಿನಾಯಕ ದೇವರ ಮಹಾಪೂಜೆಯ ನಂತರ ಎಲ್ಲ ಭಜಕರ ಹಾಗೂ ಸಾರ್ಜನಿಕರ ಪರವಾಗಿ ಅರ್ಚಕರು ಶ್ರೀ ದೇವರಲ್ಲಿ ಅಪ್ರತಿರಸಸೂಕ್ತ ಮಂತ್ರ ಪಠಿಸಿ ಪ್ರಾರ್ಥಿಸಿಕೊಂಡಿದ್ದಾರೆ.
ಇಂದು ಗೋಳಿ ಸಿದ್ದಿವಿನಾಯಕ ದೇವರ ವರ್ಧಂತಿ ಉತ್ಸವದದ ಅಂಗವಾಗಿ ಅಥರ್ವ ಶ್ರೀ ಷ ಹವನ ನಡೆಯಿತು. ವೈದಿಕರು ಮಂತ್ರ ಘೋಷಣೆಯೊಂದಿಗೆ ವಿವಿಧ ಹವ್ಯಗಳನ್ನು ಅರ್ಪಿಸಿದರು. ನಂತರ ದೇವರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಗೋಳಿ ಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಸಮೀತಿಯ ಅಧ್ಯಕ್ಷ ಎಮ್. ಎಲ್.ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.