ಹಳಿಯಾಳ : ಸಿದ್ದಿ ಬುಡಕಟ್ಟು ಸಮುದಾಯದ ಖ್ಯಾತ ಕಲಾವಿದೆ, ಸಮಾಜ ಸೇವಕಿ, ಸಿದ್ದಿ ಕಲಾ ತಂಡದ ಪ್ರವರ್ತಕಿ, ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಬಹುಮುಖ ವ್ಯಕ್ತಿತ್ವದ ಸಾಧಕಿ ಮತ್ತು ಹಳಿಯಾಳ – ಜೋಯಿಡಾ ವಿಧಾನ ಸಭಾ ಕ್ಷೇತ್ರದ ಬಗರು ಹುಕುಂ ಸಮಿತಿಯ ಸದಸ್ಯೆಯಾಗಿರುವ ಹಳಿಯಾಳ ತಾಲ್ಲೂಕಿನ ಜುಲಿಯಾನ ಪೆದ್ರು ಫರ್ನಾಂಡಿಸ್ ಅವರು ಸಮಾಜ ಸೇವೆ, ಕಲೆ, ಸಂಸ್ಕೃತಿ ಹಾಗೂ ಸಮಗ್ರ ಅಭಿವೃದ್ಧಿಗಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಮಂಡ್ಯ ಜಿಲ್ಲಾ ಕುಳುವ ಸಮಾಜ ಮತ್ತು ಡ್ರೀಮ್ ಫೌಂಡೇಶನ್ ಅವರು ರಾಜ್ಯ ಮಟ್ಟದ ಕೊರವಂಜಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜುಲಿಯಾನ ಪೆದ್ರು ಫರ್ನಾಂಡಿಸ್ ಸಿದ್ದಿ ಅವರು ರಾಜ್ಯ ಮಟ್ಟದ ಕೊರವಂಜಿ ಪ್ರಶಸ್ತಿಯನ್ನು ಗುರುವಾರ ಸ್ವೀಕರಿಸಿದರು. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಜುಲಿಯಾನ ಪೆದ್ರು ಫರ್ನಾಂಡಿಸ್ ಸಿದ್ದಿ ಅವರನ್ನು ತಾಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ.