Slide
Slide
Slide
previous arrow
next arrow

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ ಶಿಬಿರ

300x250 AD

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಜಾಗೃತಿ ಶಿಬಿರವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ನಿರುದ್ಯೋಗಿ ಯುವ ಜನತೆಗೆ ಅವರ ಆಸಕ್ತಿಗೆ ಅನುಗುಣವಾಗಿ ವಿವಿಧ ಸ್ತರಗಳಲ್ಲಿ ಊಟ, ವಸತಿ ಸಹಿತ ಉಚಿತವಾಗಿ ಸ್ವ ಉದ್ಯೋಗ ತರಬೇತಿಯನ್ನು‌ ನೀಡುವುದರ ಜೊತೆಗೆ ತರಬೇತಿಯನ್ನು ಪಡೆದ ಬಳಿಕ ನಿರಂತರವಾಗಿ ವಿವಿಧ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡಿ ಅವರನ್ನು ಯಶಸ್ವಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲಿ ಅವಿಶ್ರಾಂತ ಶ್ರಮಿಸುತ್ತಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತರಬೇತಿಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಹಾಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ ಪಡೆದುಕೊಳ್ಳುವ ಸ್ವ ಉದ್ಯೋಗ ತರಬೇತಿಗಳಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ವಹಿಸಿ, ಶಿಕ್ಷಣ ಉದ್ಯೋಗಕ್ಕೆ ಸೀಮಿತವಲ್ಲ. ಶಿಕ್ಷಣ ಸುಂದರ ಮತ್ತು ಸದೃಢ ವ್ತಕ್ತಿತ್ವ ನಿರ್ಮಾಣದ ಜೊತೆಗೆ ಸ್ಚಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣಾದಾಯಿಯಾಗಿದೆ. ಪದವಿ ಪಡೆದ ಬಳಿಕ ಉದ್ಯೋಗ ಸಿಗದೇ ಹತಾಶರಾಗುವ ಬದಲು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ ಸಿಗುವ ತರಬೇತಿಗಳಲ್ಲಿ ಭಾಗವಹಿಸಿ ಉಜ್ವಲ ಭವಿಷ್ಯದೆಡೆಗೆ ದಿಟ್ಟ ಹೆಜ್ಜೆಯಿಡಬೇಕೆಂದು ಕರೆ ನೀಡಿದರು.

300x250 AD

ವೇದಿಕೆಯಲ್ಲಿ ಪ್ರಾಧ್ಯಾಪಕರುಗಳಾದ ಡಾ.ಬಿ.ಎನ್.ಅಕ್ಕಿ, ನಿಶಾಥ್ ಶರೀಫ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ, ತರಬೇತಿ ಸಂಯೋಜಕ ಕೊಂಡು ಕೊಕರೆ ಮೊದಲಾದವರು ಉಪಸ್ಥಿತರಿದ್ದರು.

ಸೌಮ್ಯ ನೇತ್ರೇಕರ ಸ್ವಾಗತಿಸಿದರು. ನಿಶಾಥ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಷ್ಣವಿ‌‌ ಮಾನೆ ವಂದಿಸಿದರು. ಪಲ್ಲವಿ ಕಾಂಬಳೆ ಮತ್ತು ರಕ್ಷಿತಾ ನಾವಿ ಕಾರ್ಯಕ್ರಮವನ್ನು‌ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನಂತಯ್ಯ ಆಚಾರ್ ಅವರು ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡಿದರು.

Share This
300x250 AD
300x250 AD
300x250 AD
Back to top