ಶಿರಸಿ: ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ದತ್ತಿ ನಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿ., ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.. ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವ ಈ ಸಮಾರಂಭವು, ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ್ ಮಾರ್ಗದರ್ಶನದಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವಿ ನಾಯಕ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಎಂ.ಜೆ.ಎಫ್.ಲಯನ್ ಲೋಕೇಶ್ ಹೆಗಡೆ ಮಾತನಾಡುತ್ತಾ, ನಮ್ಮ ವಿದ್ಯಾರ್ಥಿಗಳು ಕೇವಲ ಆಟ ಪಾಠಗಳಲ್ಲಿ ಮಾತ್ರವಲ್ಲ, ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕಾದ್ದು ನಮ್ಮ ಕರ್ತವ್ಯ, ಸಂತಸದಿಂದ ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಂ.ಜೆ.ಎಫ್. ಲ. ಪ್ರಭಾಕರ ಹೆಗಡೆ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಲಯನ್ಸ್ ಎಜುಕೇಶನ್ ಸೊಸೈಟಿ ಸದಸ್ಯರಾದ ಎಂ.ಜೆ.ಎಫ್ ಲಯನ್ ತ್ರಿವಿಕ್ರಮ್ ಪಟವರ್ಧನ್, ಲ.ಶ್ಯಾಮಸುಂದರ್ ಭಟ್, ಶಿರಸಿ ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಅಶ್ವತ್ ಹೆಗಡೆ, ಲಿಯೋ ಅಡ್ವೈಸರ್ ಲ. ಅಶ್ವತ್ಥ್ ಹೆಗಡೆ ಮುಳಖಂಡ ಹಾಗೂ ಇನ್ನಿತರ ಲಯನ್ಸ್ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಲಿಯೋ ಅಡ್ವೈಸರ್ ಲ.ಅಶ್ವತ್ಥ್ ಹೆಗಡೆ ಮುಳಖಂಡ “ಬಹುಮಾನಗಳ ನಿರೀಕ್ಷೆಗಿಂತ ಭಾಗವಹಿಸುವಿಕೆ ಅಗತ್ಯ” ಎನ್ನುವ ಸಂದೇಶ ನೀಡಿದರು. ಲಯನ್ಸ್ ಸಮೂಹ ಶಾಲೆಗಳ ಪ್ರಾಚಾರ್ಯರಾದ ಶಶಾಂಕ್ ಹೆಗಡೆ ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಶ್ರೀಮತಿ ಅನಿತಾ ಭಟ್, ಶ್ರೀಮತಿ ರೇಷ್ಮಾ ಮಿರಾಂದಾ, ಶ್ರೀಮತಿ ಗೀತಾ ನಾಯ್ಕ ಅವರ ಮುಂದಾಳತ್ವದಲ್ಲಿ ಇತರ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ, ವಿದ್ಯಾರ್ಥಿ ಪ್ರತಿನಿಧಿಗಳ ಸಹಾಯದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಯಿತು, . ಹತ್ತನೆಯ ತರಗತಿಯ ವಿದ್ಯಾರ್ಥಿನಿಯರಾದ ಸುಪರ್ಣಾ ಹಿರೇಮಠ್ ಮತ್ತು ಕುಮಾರಿ ಸೃಷ್ಟಿ ಗೌಳಿ ಕಾರ್ಯಕ್ರಮ ನಿರೂಪಿಸಿದರು.