ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಸಭಾಭವನದಲ್ಲಿ ಗುರುವಾರ ಡಿಡಿಪಿಐ ಕಾರ್ಯಾಲಯ, ಡಾ. ಎಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಮತ್ತು ಅಪರ ಆಯುಕ್ತರ ಕಚೇರಿ ಧಾರವಾಡ ಇವರ ಸಯುಕ್ತ ಆಶ್ರಯದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಲಯ ಮಟ್ಟದದಲ್ಲಿ ಸಾಧನೆ ಮಾಡಿದ ಕನ್ನಡ ಮಾಧ್ಯಮ ಮಕ್ಕಳಿಗೆ ಮತ್ತು ವಿಷಯವಾರು ಶಿಕ್ಷಕರಿಗೆ ಶಿಕ್ಷಣ ಪರಿಶ್ರಮ ಹಿರಿಮೆಗಾಗಿ ಮನ್ನಣೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜಿಲ್ಲೆಯ ಪ್ರತಿ ತಾಲೂಕಿನ 6 ವಿಷಯವಾರು ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಲ್.ಬಸವರಾಜು ಮಾತನಾಡಿ, ಸತತವಾದ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಸಮಾಜಕ್ಕೆ ಮಾರ್ಗದರ್ಶಕರಾಗಿ ಬದುಕಬೇಕಾದರೆ ಆದರ್ಶ ವ್ಯಕ್ತಿತ್ವ ಗಳಿಸಿಕೊಳ್ಳಬೇಕು ಎಂದರು.ಕಟ್ಟಿಮನಿ ಪ್ರತಿಷ್ಠಾನದ ಸಂಸ್ಥಾಪಕ ಶಿವಶಂಕರ ಹಿರೇಮಠ್ ಕಾರ್ಯಕ್ರಮ ಸಭೆಯನ್ನು ಉದ್ಘಾಟಿಸಿದರು. ಬಿಇಒ ಎನ್. ಆರ್ ಹೆಗಡೆ. ಪ್ರತಿಷ್ಠಾನದ ಸಂಚಾಲಕರಾದ ಎಸ್.ಪಿ.ಕೊಡ್ಲಿ, ಎಂ. ಎಚ್.ನಾಯಕ್, ಭಾಗವಹಿಸಿದ್ದರು.
ಶಿಕ್ಷಕರಾದ ಚಿದಾನಂದ ಸಿ ಹಳ್ಳಿ, ಚಂದ್ರಪ್ಪ ವಂಟಮುರಿ, ಚಂದ್ರಕಾಂತ ಗಾಂವಕರ, ಹೇಮಲತಾ, ಯಶೋದಾ ಭಟ್, ಶೃದ್ದಾ,ಇವರಿಗೆ ಶಿಕ್ಷಣ ಪರಿಶ್ರಮ ಮನ್ನಣೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.