Slide
Slide
Slide
previous arrow
next arrow

ಕಾಮಧೇನು ದೀಪಾವಳಿ-2021 ಅಭಿಯಾನಕ್ಕೆ ಚಾಲನೆ

300x250 AD


ನವದೆಹಲಿ: ಹಸುವಿನ ಸಗಣಿಯಿಂದ ತಯಾರಿಸಿದ ದೀಪಗಳು ಮತ್ತು ಲಕ್ಷ್ಮಿ-ಗಣೇಶ ಮೂರ್ತಿಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಕಾಮಧೇನು ದೀಪಾವಳಿ 2021 ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಮಾಜಿ ಸಚಿವ ಮತ್ತು ರಾಷ್ಟ್ರೀಯ ಕಾಮಧೇನು ಆಯೋಗದ ಮಾಜಿ ಅಧ್ಯಕ್ಷ ಡಾ. ವಲ್ಲಭಭಾಯಿ ಕಟಾರಿಯಾ ಅವರು ತಮ್ಮ ತಂಡದೊಂದಿಗೆ ರಾಷ್ಟ್ರೀಯ ವೆಬಿನಾರ್ ಅನ್ನು ಆಯೋಜಿಸಿ ಕಾಮಧೇನು ದೀಪಾವಳಿ ಅಭಿಯಾನಕ್ಕೆ ಚಾಲನೆ ನೀಡಿದರು.

ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವ ಪರುಶೋತ್ತಮ್ ರೂಪಾಲ ಸೇರಿದಂತೆ ಭಾರತದಾದ್ಯಂತ ಗೋ ಉತ್ಪನ್ನಗಳ ಉದ್ಯಮಿಗಳು ಮತ್ತು ಗೋ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಮಧೇನು ದೀಪಾವಳಿಗಾಗಿ ಸಭೆ, ವೆಬಿನಾರ್‍ಗಳು ಮತ್ತು ತರಬೇತಿ ಕಾರ್ಯಕ್ರಮಗಳು ಪ್ರತಿ ರಾಜ್ಯದಲ್ಲೂ ಆರಂಭಗೊಳ್ಳುತ್ತಿವೆ.

300x250 AD

ಹಸುಗಳ ಸಗಣಿ, ಹಸುವಿನ ಮೂತ್ರ, ಹಾಲು, ಮೊಸರು, ತುಪ್ಪ ಸೇರಿದಂತೆ ಗೋ ಉತ್ಪನ್ನಗಳ ಸರಿಯಾದ ಬಳಕೆಯ ಮೂಲಕ ಗೋವುಗಳನ್ನು ಆರ್ಥಿಕವಾಗಿ ಉಪಯುಕ್ತವಾಗಿಸುವುದು ಕಾಮಧೇನು ದೀಪಾವಳಿಯ ಉದ್ದೇಶ. 300 ಕ್ಕೂ ಹೆಚ್ಚು ವಸ್ತುಗಳನ್ನು ಹಸುವಿನ ಪಂಚಗವ್ಯದ ಮೂಲಕ ತಯಾರಿಸಲಾಗುತ್ತಿದೆ. ಇದು ದೀಪಾವಳಿ ದೀಪಗಳು, ಮೇಣದ ಬತ್ತಿಗಳು, ಸಾಂಬ್ರಾಣಿ ಕಪ್, ಹವನಸಾಮಗ್ರಿ, ಧೂಪಬತ್ತಿ, ಧೂಪದ್ರವ್ಯಗಳು, ಹಾರ್ಡ್ ಬೋರ್ಡ್, ವಾಲ್ ಪೀಸ್, ಲಕ್ಷ್ಮಿ-ಗಣೇಶ ಮೂರ್ತಿಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಗೋ ಉದ್ಯಮಿಗಳು ಮತ್ತು ಗೋ ಮಾಲೀಕರು ತಯಾರಿಸಿದ ಗೋಮಯ ದೀಪಗಳು ರಾಸಾಯನಿಕ ಆಧಾರಿತ ಚೀನೀ ದೀಪಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಒದಗಿಸುವ ಮೂಲಕ ಪರಿಸರವನ್ನು ಉಳಿಸುತ್ತದೆ. ಕಳೆದ ವರ್ಷ ಕೋಟಿಗಟ್ಟಲೆ ಹಸುವಿನ ಸಗಣಿ ದೀಪಗಳನ್ನು ಭಾರತದಾದ್ಯಂತ ತಯಾರಿಸಲಾಗಿತ್ತು. ರಾಷ್ಟ್ರೀಯ ಕಾಮಧೇನು ಆಯೋಗವು ಭಾರತದಾದ್ಯಂತ ಅನೇಕ ಸ್ವಯಂಸೇವಕ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ತರಬೇತಿಯನ್ನು ನೀಡಿದೆ. ಇದು ಹೆಚ್ಚಿನ ಸಂಖ್ಯೆಯ ಹಸುವಿನ ಸಗಣಿ ಆಧಾರಿತ ಸ್ಟಾರ್ಟ್ ಅಪ್‍ಗಳಿಗೆ ಕಾರಣವಾಯಿತು. ಈ ಬಾರಿ ಅಭಿಯಾನವು ಉನ್ನತ ಹಂತ ತಲುಪಲಿದೆ. ಭಾರತದಾದ್ಯಂತ ಗೋ ಆಧಾರಿತ ಉದ್ಯಮಿಗಳು ಈ ಅಭಿಯಾನದಿಂದ ಪ್ರಯೋಜನ ಪಡೆಯುತ್ತಾರೆ. ಈ ಪರಿಸರ ಸ್ನೇಹಿ ಅಭಿಯಾನವು ಗೋಶಾಲೆಗಳು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಇದು ಪ್ರಧಾನಮಂತ್ರಿಯವರ ಸ್ಟಾರ್ಟ್ ಅಪ್ ಇಂಡಿಯಾ',ಆತ್ಮನಿರ್ಭರ ಭಾರತ್’ ನ ದೃಷ್ಟಿಕೋನವನ್ನು ಸಶಕ್ತಗೊಳಿಸುತ್ತದೆ.
ನ್ಯೂಸ್ 13

Share This
300x250 AD
300x250 AD
300x250 AD
Back to top