Slide
Slide
Slide
previous arrow
next arrow

ಗರಿ-ಗರಿಯಾದ ಖಾರದ ಅವಲಕ್ಕಿ ಮಾಡಿ ಸವಿದು ನೋಡಿ

300x250 AD

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಗಟ್ಟಿ ಅವಲಕ್ಕಿ-3ಕಪ್, 1 ಕಪ್- ಕಡಲೇಬೀಜ, 1-ಕಪ್ -ಹುರಿಕಡಲೆ, ಬೆಳ್ಳುಳ್ಳಿ-15 ಎಸಳು ಸ್ವಲ್ಪ ಜಜ್ಜಿಕೊಂಡಿದ್ದು, 15-ಬ್ಯಾಡಗಿ ಮೆಣಸು, ಕಪ್ -ಒಣಕೊಬ್ಬರಿ ಚಿಕ್ಕದಾಗಿ ಕತ್ತರಿಸಿಕೊಂಡಿರಬೇಕು, 2 ಚಮಚ-ಅಚ್ಚ ಖಾರದ ಪುಡಿ,1 ಟಿ ಸ್ಪೂನ್ ಅರಿಶಿನ, ಚಿಟಿಕೆ ಇಂಗು, 1 ಟೀ ಸ್ಪೂನ್ – ಸಾಸಿವೆ, ಕರಿಬೇವು-4 ದಂಟು, ಎಣ್ಣೆ-ಕರಿಯಲು, ಉಪ್ಪು-ರುಚಿಗೆ ತಕ್ಕಷ್ಟು,

ಮಾಡುವ ವಿಧಾನ: ಮೊದಲಿಗೆ ಅಗಲವಾದ ಒಂದು ಬಾಣಲೆಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಸರಿಯಾಗಿ ಬಿಸಿಯಾಗಲಿ, ಸ್ವಲ್ಪ ಸ್ವಲ್ಪವೇ ಅವಲಕ್ಕಿಯನ್ನು ಎಣ್ಣೆ ಬಾಣಲೆಗೆ ಹಾಕಿ ಎತ್ತಿಟ್ಟುಕೊಳ್ಳಿ. ನಂತರ ಕಡಲೇಕಾಯಿ ಬೀಜವನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಇದನ್ನು ಅವಲಕ್ಕಿ ಹುರಿದಿಟ್ಟುಕೊಂಡ ಪಾತ್ರೆಗೆ ಹಾಕಿ ಇದಾದ ನಂತರ ಬೆಳ್ಳುಳ್ಳಿಯನ್ನು ಹುರಿದು ಎತ್ತಿಟ್ಟುಕೊಳ್ಳಿ.

300x250 AD

ಇದಾದ ನಂತರ ಒಣಕೊಬ್ಬರಿಯನ್ನು, ಬ್ಯಾಡಗಿ ಮೆಣಸು, ಹುರಿಕಡಲೆ, ಕರಿಬೇವು ಎಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಇದನ್ನು ಅವಲಕ್ಕಿ ಇರುವ ಪಾತ್ರೆಗೆ ಹಾಕಿ ನಂತರ ಅವಲಕ್ಕಿಗೆ ಖಾರದ ಪುಡಿ, ಉಪ್ಪು, ಅರಿಶಿನ, ಸೇರಿಸಿ, ನಂತರ ಗ್ಯಾಸ್ ಮೇಲೆ ಒಗರಣೆ ಮಾತ್ರ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು ಹಾಕಿ ಹುರಿದುಕೊಂಡು, ಈ ಒಗರಣೆಯನ್ನು ಅವಲಕ್ಕಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.

Share This
300x250 AD
300x250 AD
300x250 AD
Back to top