ಶಿರಸಿ: ಯಾವುದೇ ಒಂದು ರಾಷ್ಟ್ರ ಸಧೃಢವಾಗಿ ನಿರ್ಮಾಣವಾಗಬೇಕಾದರೆ ಭೌಗೋಳಿಕವಾಗಿ ಲಭ್ಯವಿರುವ ಖನಿಜ ಸಂಪನ್ಮೂಲಗಳಲ್ಲದೆ ಬಲಾಢ್ಯವಾದ ಮಾನವ ಸಂಪನ್ಮೂಲವು ಅತಿ ಅವಶ್ಯಕ.ದೇಶದ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಯುವಕರು ಮುಂದಾಗಬೇಕು ಸುಸ್ಥಿರ ಅಭಿವೃದ್ಧಿ ಸಾಧಿಸಲು ಯುವಕರು ತಮ್ಮ ಗುರಿ ಸಾಧನೆಗೆ ಸ್ವಾಮೀ ವಿವೇಕಾನಂದರ ಆದರ್ಶ ಪ್ರೇರಣೆಯಾಗಲಿ ಎಂದು ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ನರೇಂದ್ರ ನಾಯಕ ಹೇಳಿದರು.
ಅವರು ನಿಲೇಕಣಿ ಪ್ರೌಢಶಾಲೆಯಲ್ಲಿ ಯೂತ್ ಫಾರ್ ಸೇವಾ ಹಮ್ಮಿಕೊಂಡಿದ್ದ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡುತ್ತಾ ಯುತ್ ಫಾರ್ ಸೇವಾ ಯುವಕರಿಗಾಗಿ ಅನೇಕ ರೀತಿಯ ಕಾರ್ಯ ಮಾಡುತ್ತಿದೆ. ತಾವು ಬೆಳೆಯುತ್ತಾ ಸಮಾಜ ಅಭಿವೃದ್ಧಿ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಮಾತಿಗಿಂತ ಕೃತಿ ಲೇಸು ಯುವಕರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಜಾಗತಿಕ ತಾಪಮಾನದಿಂದಾಗಿ ಪರಿಸರ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆ ಯಾಗಿದೆ. ಹಸಿರು ರಕ್ಷಣೆ, ಜಲಸಂರಕ್ಷಣೆಯಲ್ಲಿ ಕಾರ್ಯ ಮಾಡುವ ಅಗತ್ಯವಿದೆ ಯುತ್ ಫಾರ್ ಸೇವಾ ಪರಿಸರ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಅತಿಥಿಯಾಗಿದ್ದ ಸಹ್ಯಾದ್ರಿ ಆಪ್ಟಿಶಿಯನ್ ಮಾಲಿಕರು, ಯುಥ್ ಫಾರ್ ಸೇವಾ ಸಲಹಾ ಸಮಿತಿ ಸದಸ್ಯರು ಶ್ರೀಧರ ಇಸಳೂರು ಹೇಳಿದರು.
ಯೂತ್ ಫಾರ್ ಸೇವಾ ಪರಿಸರ ವಿಭಾಗದ ರಾಜ್ಯ ಸಂಯೋಜಕ ಉಮಾಪತಿ ಭಟ್ಟ್ ಪ್ರಾಸ್ತಾವಿಕ ಮಾತನಾಡಿದರು.
.ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರವಿ ಬೆಳಕವಾಡಿ,ಅರಣ್ಯ ಇಲಾಖೆ – ನರ್ಸರಿ ,ಶ್ರೀ ನಾರಾಯಣ ನಾಯಕ ಇಂಜಿನಿಯರ್ ನಗರ ಸಭೆ – ಬಯೋ ವೇಸ್ಟ್ ಮೆನೇಜ್‌ಮೆಂಟ್ .ಸಂಜನಾ, ಮತ್ತು ಕು.ಸೌಖ್ಯ – ಪರಿಸರ ಗೀತೆಗಳು ಶ್ರೀ ಮಧುಕೇಶ್ವರ ಹೆಗಡೆ ಕಲ್ಲಳ್ಳಿ – ಜೇನುಕೃಷಿ, ಶ್ರೀ ಉಮಾಪತಿ ಭಟ್ಟ್ ಕೆವಿ – ಪರಿಸರ ಸಂರಕ್ಷಣೆ ಮಜಲುಗಳು ಶ್ರೀ ಮನೋಜ ದೊಡ್ಡವಾಡ – ಪಕ್ಷಿ ಪ್ರಪಂಚ ಶ್ರಿ ವಿಜೇತ ನಾಯ್ಕ – ಇಕೋ ಬ್ರಿಕ್ಸ್ ಮತ್ತು ಬೀಜದುಂಡೆ
ಸನ್ನಿಧಿ ವಿ – ರಸಪ್ರಶ್ನೆ ಮೇಘಾ ಪಟ್ಟೇದ್ – ಪ್ಲಾಸ್ಟಿಕ್ ಜಾಗೃತಿ,. ಪವಿತ್ರ ಮೂಡಸಾಲಿ – ರಾಷ್ಟ್ರೀಯ ಚಿನ್ಹೆಗಳು, ಎನ್ ಬಿ. ನಾಯ್ಕ – ಔಷಧಿಯ ಸಸ್ಯಗಳು ಪಾಲ್ಗೊಂಡಿದ್ದರು
ರಮ್ಯಾ ಹೆಗಡೆ ಸ್ವಾಗತಿಸಿದರು, ಪವಿತ್ರಾ ಮೂಡಸಾಲಿ ವಂದಿಸಿದರು. ಜಿಲ್ಲಾ ಸಂಯೋಜಕ ವಿಜೇತ ನಾಯ್ಕ ನಿರೂಪಿಸಿದರು.