Slide
Slide
Slide
previous arrow
next arrow

ಇಂಡಿಯಾ ಬುಕ್ ಆಪ್ ರೆಕಾರ್ಡ್’ನಲ್ಲಿ ಸಾಧನೆಗೈದ ಧನ್ಯಾ ಹೆಗಡೆ

300x250 AD

ಶಿರಸಿ: ಕೇವಲ ಏಳು ಹಲಸಿನ ಎಲೆಗಳನ್ನು ಬಳಸಿ ಹಿಂದಿ ಅಕ್ಷರದಲ್ಲಿ ರಾಷ್ಟ್ರಗೀತೆ ಬರೆಯುವ ಮೂಲಕ ಸಿದ್ದಾಪುರ ತಾಲ್ಲೂಕಿನ ಗುಡ್ಡೆಶಿರಗೋಡ ಗ್ರಾಮದ ಧನ್ಯ ಹೆಗಡೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಈಕೆ ಹಲಸಿನ ಎಲೆಗಳ ಮೇಲೆ ರಾಷ್ಟ್ರಗೀತೆ ಬರೆಯುವ ಪ್ರಯತ್ನ  ನಡೆಸಿದ್ದಳು. ಸತತ ಪ್ರಯತ್ನದ ಫಲವಾಗಿ ಮೇ ತಿಂಗಳಿನಲ್ಲಿ ಕೇವಲ ಏಳು ಎಲೆಗಳಲ್ಲೇ ಗುರಿ ಸಾಧಿಸಿದ್ದಾಳೆ. ಜೂ.4 ರಂದು ಈಕೆಯ ಸಾಧನೆಯನ್ನು ಪುರಸ್ಕರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಹೆಸರು ದಾಖಲು ಮಾಡಲಾಗಿದೆ.

300x250 AD

ಧನ್ಯ ಕೃಷ್ಣಮೂರ್ತಿ ಹೆಗಡೆ ಮತ್ತು ಸವಿತಾ ಹೆಗಡೆ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಸರಕುಳಿಯ ಜಗದಂಬಾ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

Share This
300x250 AD
300x250 AD
300x250 AD
Back to top