Slide
Slide
Slide
previous arrow
next arrow

ಕರಾವಳಿಯಲ್ಲಿ ಮಳೆ; ರೈಲು ಸಂಚಾರದಲ್ಲಿ ವ್ಯತ್ಯಯ;ಇಲ್ಲಿದೆ ಮಾಹಿತಿ

300x250 AD

ಭಟ್ಕಳ: ಭಾರೀ ಮಳೆಯ ಕಾರಣ ಮುರ್ಡೇಶ್ವರ ಮತ್ತು ಭಟ್ಕಳ ರೈಲು ನಿಲ್ದಾಣದ ನಡುವೆ ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು, ಇದರಿಂದಾಗಿ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಕಾರಣದಿಂದ ಕೆಲವು ರೈಲುಗಳ ಸಂಚಾರವನ್ನು ಕೊಂಕಣ ರೈಲ್ವೆ ರದ್ದುಪಡಿಸಿದ್ದು, ಇನ್ನು ಕೆಲವನ್ನು ಭಟ್ಕಳ ಪ್ರವೇಶಕ್ಕೂ ಪೂರ್ವವೇ ವಾಪಸ್ಸು ಕಳುಹಿಸಲಾಗುತ್ತಿದೆ.

ರೈಲು ಸಂಖ್ಯೆ 06602 ಮಂಗಳೂರು- ಮಡಗಾಂವ್ ವಿಶೇಷ ರೈಲನ್ನು ಉಡುಪಿ ನಿಲ್ದಾಣದವರೆಗೆ ಮಾತ್ರ ಓಡಿಸಲಾಗುತ್ತಿದೆ. ರೈಲು ಸಂಖ್ಯೆ 06601 ವಿಶೇಷ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 11098 ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್ ರೈಲು ಭಟ್ಕಳ ನಿಲ್ದಾಣದಲ್ಲಿ ನಿಂತಿದೆ. ರೈಲು ಸಂಖ್ಯೆ 16595 ಬೆಂಗಳೂರು ಸಿಟಿ ಜಂಕ್ಷನ್- ಕಾರವಾರ ಎಕ್ಸ್‌ಪ್ರೆಸ್ ಅನ್ನು ಶಿರೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ಸಂಖ್ಯೆ 16334 ತ್ರಿವೇಂದ್ರಮ್- ವೇರವಲ್ ಎಕ್ಸ್‌ಪ್ರೆಸ್ ಸೇನಾಪುರ ನಿಲ್ದಾಣದಲ್ಲಿ, ರೈಲು ಸಂಖ್ಯೆ 12201 ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್- ಕೊಚ್ಚುವೇಲಿ ಎಕ್ಸ್‌ಪ್ರೆಸ್ ಅಂಕೋಲಾ ನಿಲ್ದಾಣದಲ್ಲಿ ಹಾಗೂ ರೈಲು ಸಂಖ್ಯೆ 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ಹೊನ್ನಾವರ ನಿಲ್ದಾಣದಲ್ಲಿ ನಿಲುಗಡೆಗೊಂಡಿದೆ. 

ಈ ರೈಲುಗಳ ಸಂಚಾರ ಪುನರಾರಂಭಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮಧ್ಯಾಹ್ನ  12 ಗಂಟೆಯ ವೇಳೆಗೆ ಸಂಚಾರವನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

300x250 AD

ನಿರಾಶ್ರಿತರ ಸ್ಥಳಾಂತರ: ಭಟ್ಕಳ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ  ಬೆಂಗ್ರೆ ಹಾಗೂ ಮತ್ತಿತರ ಜಲಾವೃತ ಗ್ರಾಮಗಳಲ್ಲಿನ ಜನರನ್ನು ಅಗ್ನಿಶಾಮಕ ಇಲಾಖೆ, SDRF ತಂಡ, ಪೊಲೀಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಶಿರಾಲಿ ಚಂಡಮಾರುತ ಆಶ‍್ರಯತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.  ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಭಟ್ಕಳ ತಾಲೂಕಾ ಕಂಟ್ರೋಲ್ ರೂಂ ನಂ. 08385-226422 ಹಾಗೂ ಜಿಲ್ಲಾ ಕಂಟ್ರೋಲ್ ರೂಂ. 1077/ 08382-229857  ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Share This
300x250 AD
300x250 AD
300x250 AD
Back to top