• Slide
    Slide
    Slide
    previous arrow
    next arrow
  • ಮತ್ತೀಘಟ್ಟದಲ್ಲಿ ಸಂಪನ್ನಗೊಂಡ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ

    300x250 AD

    ಶಿರಸಿ: ಬೆಳೆಸಿರಿ ರೈತ ಉತ್ಪಾದಕ ಕಂಪನಿ ಮತ್ತಿಘಟ್ಟ ಹಾಗೂ ಮುಂಡಗನಮನೆ ಸೇವಾ ಸಹಕಾರಿ ಸಂಘ ದ ಸಹಯೋಗದಲ್ಲಿ ಆ.24ರಂದು ಮತ್ತಿಘಟ್ಟದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ‍್ಯಕ್ರಮವು ನಡೆಯಿತು. ಮುಖ್ಯ ಉಪಸ್ಥಿತರು ಹಾಗೂ ವಿಚಾರ ವಿಶ್ಲೇಷಕರಾಗಿ ವಿಜ್ಞಾನಿ  ಡಾ.ಮಂಜುನಾಥ ಮತ್ತು ಅತಿಥಿಯಾಗಿ ಶ್ರೀ ಪ್ರಶಾಂತ ನಾಯ್ಕ ಭಾಗವಹಿಸಿದ್ದರು.

    ಕಾರ್ಯಕ್ರಮದ ಭಾಗವಾಗಿ ಮತ್ತೀಘಟ್ಟ ಭಾಗದ ರೈತ ಸದಸ್ಯರಾದ ಶ್ರೀ ನರಸಿಂಹ ದಿವೇಕರ ದೇವನಳ್ಳಿ ಅವರ ಮನೆಯ ಅಡಿಕೆ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಅಡಿಕೆ ಮರಗಳ ಹಾಗೂ  ಮಣ್ಣಿನ ರೋಗ ಲಕ್ಷಣಗಳ ಸಮಗ್ರ ಮಾಹಿತಿ ಜೊತೆಗೆ ಪರಿಹಾರವನ್ನು ನೀಡಲಾಯಿತು.

    ನಂತರ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ‍್ಯಕ್ರಮದಲ್ಲಿ
    ಮುಕ್ತ ಚರ್ಚೆಯಲ್ಲಿ ರೈತರು ಭಾಗವಹಿಸಿದ್ದರು. ಅಡಿಕೆ ಮರಗಳಲ್ಲಿನ ರೋಗ ಲಕ್ಷಣಗಳಿಗೆ ಅಲ್ಲಿನ ಮಣ್ಣಿನ ಗುಣ ಹಾಗೂ ಮಣ್ಣಿನಲ್ಲಿರಬೇಕಾದ ಅವಶ್ಯಕ  ಅಂಶದ ಕೊರತೆಯ ಬಗ್ಗೆ ಮೊದಲು ಗಮನ ಹರಿಸಲು ಡಾ .ಮಂಜುನಾಥ್ ಸೂಚಿಸಿದರು. ಮುಂದಿನ ದಿನಗಳಲ್ಲಿ ರೈತರ ತೋಟದ ಮಣ್ಣಿನ ಪರೀಕ್ಷೆ ನಡೆಸಿ, ಅದರಲ್ಲಿನ ಕುಂದು ಕೊರತೆಯನ್ನು ಪತ್ತೆ ಹಚ್ಚಿ, ಅದಕ್ಕೆ ಬೇಕಾಗಿರುವ  ಅಂಶವನ್ನು ಸೂಕ್ತ ರೀತಿಯಲ್ಲಿ ಒದಗಿಸಿ ಸದೃಢ ತೋಟವನ್ನು ನಿರ್ಮಿಸಲು  ಬೆಳೆಸಿರಿ ರೈತ ಉತ್ಪಾದಕ ಸಂಸ್ಥೆಯು ಸಹಕಾರಿಯಾಗಲಿದೆ ಎಂದು ಶ್ರೀ ಪ್ರಶಾಂತ ನಾಯ್ಕ ರವರು ಅಭಿಪ್ರಾಯ ವ್ಯಕ್ತಪಡಿಸಿದರು. 

    300x250 AD

    ಈ ಕಾರ‍್ಯಕ್ರಮದಲ್ಲಿ ಬೆಳೆಸಿರಿ ಅಧ್ಯಕ್ಷರಾದ ಶ್ರೀ ಶ್ರೀಪಾದ ಪಾಟೀಲ್ ರೈತರ ಬೆಳೆಯನ್ನು ಹೆಚ್ಚಿಸುವಲ್ಲಿ ಆವಶ್ಯಕ
    ಸಲಹೆ ಸೂಚನೆಗಳನ್ನು ನೀಡಿದ ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತಾ ರೈತರ ತೋಟಗಳಿಗೆ ಅಗತ್ಯವಾದ
    ಗೊಬ್ಬರ,ಮೈಕ್ರೋನ್ಯೂಟ್ರಿಯೆಂಟ್ಸ್ಗಳನ್ನು ನಮ್ಮ ಕಂಪನಿಯ ವತಿಯಿಂದ ತರಿಸಿಕೊಡಲಾಗುವದು
    ಎಂದು ತಿಳಿಸಿದರು. 

    ಮುಖ್ಯ ಕಾರ‍್ಯನಿರ್ವಾಹಕರಾದ ಚಿನ್ಮಯ ಹೆಗಡೆ ಹಾಗು ನಿರ್ದೇಶಕರುಗಳು, ಮುಂಡಗನಮನೆ
    ಸೇವಾ ಸಹಕಾರಿ ಸಂಘದ ಮುಖ್ಯ ಕಾರ‍್ಯನಿರ್ವಾಹಕ ಶ್ರೀ ನಾಗಪತಿ ಭಟ್ ಮತ್ತು ಆಡಳಿತ ವರ್ಗದವರು ಹಾಗೂ
    ಸಿಬ್ಬಂದಿ ವರ್ಗದವರು, ಅನೇಕ ರೈತ ಸದಸ್ಯರು ಈ ವೇಳೆ ಭಾಗಿಯಾಗಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top