Slide
Slide
Slide
previous arrow
next arrow

ಹೊಸಕಂಬಿ ಗಂಗಾವಳಿ ನದಿಯ ಸೇತುವೆ ನದಿ ದಂಡೆಯಲ್ಲಿ ಮೊಸಳೆ ಪ್ರತ್ಯಕ್ಷ : ಸ್ಥಳೀಯರ ಆತಂಕ

300x250 AD

ಅಂಕೋಲಾ: ತಾಲೂಕಿನ ಹೊಸಕಂಬಿ ಗಂಗಾವಳಿ ನದಿಯ ಸೇತುವೆ ನದಿ ದಂಡೆಯಲ್ಲಿ ಗುರುವಾರ ಸಾಯಂಕಾಲ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಮೊಸಳೆ ಕಾಣಿಸಿಕೊಂಡಿರುವ ಎರಡೂ ದಂಡೆಯ ಆಸುಪಾಸಿನಲ್ಲಿ ಕೃಷಿ ಜಮೀನುಗಳು ಇದ್ದು, ನಿತ್ಯ ಕೃಷಿ ಕಾರ್ಯಗಳಿಗಾಗಿ ಅಲ್ಲಿಯೆ ಇರುತ್ತಾರೆ ಮತ್ತು ನದಿ ದಡಕ್ಕೆ ತೆರಳುವುದು ಸಹಜ. ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಮೊಸಳೆಯಿಂದ ಸ್ಥಳೀಯ ಜನರು ಕೂಡ ಆತಂಕಗೊಂಡಿದ್ದಾರೆ.

ಕಳೆದ ಐದಾರು ತಿಂಗಳ ಹಿಂದೆ ಗಂಗಾವಳಿ ನದಿಯಲ್ಲಿ ನದಿಯಲ್ಲಿ 1 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಅದೆ ಮೊಸಳೆ ಗಂಗಾವಳಿ ನದಿಯ ಹೊಸಕಂಬಿ ಬಳಿ ಕಾಣಿಸಿಕೊಂಡಿದೆ.

300x250 AD

ಹೊಸಕಂಬಿ ಗ್ರಾಮ ಸೇರಿದಂತೆ ಹಿಲ್ಲೂರು ಕುಂಟಕಣಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಮೊಸಳೆ ಕಾಣಿಸಿಕೊಂಡ ವಿಷಯವನ್ನು ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top