Slide
Slide
Slide
previous arrow
next arrow

ರುಚಿಕಟ್ಟಾದ ಬಾಕಾಹು ಬರ್ಫಿ

300x250 AD

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ ಹಿಟ್ಟು ಒಂದು ಕಪ್, ಹಾಲು ಒಂದು ಕಪ್, ಸಕ್ಕರೆ ಒಂದು ಕಪ್, ತುಪ್ಪ ಅರ್ಧ ಕಪ್, ಏಲಕ್ಕಿ ಪುಡಿ, ಗೋಡಂಬಿ ಚೂರುಗಳು

300x250 AD

ತಯಾರಿಸುವ ವಿಧಾನ: ಮೊದಲು ಬಾಳೆಕಾಯಿ ಹುಡಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಸುಮಾರು 3-4 ನಿಮಿಷ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಹಾಲು ಸೇರಿಸಿ, ಕೈ ಬಿಡದೆ ಗೊಟಾಯಿಸುತ್ತಾ ಇರಿ. ಮೊದಲು ಗಂಟಿನಂತೆ ಕಂಡು ಬಂದರೂ ಚೆನ್ನಾಗಿ ಮಿಶ್ರಣ ಮಾಡುವಾಗ ಸರಿಯಾಗುತ್ತದೆ. ನಂತರ ಸಕ್ಕರೆ ಹಾಕಿ, ಮಧ್ಯೆ ಮಧ್ಯೆ ತುಪ್ಪ ಹಾಕಿಕೊಳ್ಳುತ್ತಾ ಗಟ್ಟಿ ಮುದ್ದೆಯಾಗುವವರೆಗೂ ಮಗುಚಿ, ಏಲಕ್ಕಿ ಪುಡಿ ಹಾಕಿ ಸಂಪೂರ್ಣ ತಳ ಬಿಟ್ಟ ನಂತರ ತುಪ್ಪ ಸವರಿದ ಪ್ಲೇಟಿಗೆ ಹಾಕಿ ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಕತ್ತರಿಸಿ,

Share This
300x250 AD
300x250 AD
300x250 AD
Back to top