• Slide
  Slide
  Slide
  previous arrow
  next arrow
 • ವಿದ್ಯುತ್ ದುರಸ್ತಿ ಕಾರ್ಯ ಯಶಸ್ವಿ

  300x250 AD

  ದಾಂಡೇಲಿ: ತಾಲ್ಲೂಕಿನ 220/11 ಕೆವಿ ಅಂಬೇವಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ 11 ಕೆವಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕರ‍್ಯವು ಯಶಸ್ವಿಯಾಗಿ ಸಂಪನ್ನಗೊಂಡಿತು. ವಿದ್ಯುತ್ ಮಾರ್ಗದ ದುರಸ್ತಿ ಮತ್ತು ವಿದ್ಯುತ್ ಉಪ ಕೇಂದ್ರದ ನಿರ್ವಹಣಾ ಕಾರ‍್ಯದ ನಿಮಿತ್ತ ದಾಂಡೇಲಿ ನಗರ ಸೇರಿದಂತೆ ತಾಲ್ಲೂಕಿನ 4 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
  ಹೆಸ್ಕಾಂ ಕಾರ‍್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತ ಮಲ್ಯ ಮತ್ತು ಸಹಾಯಕ ಕಾರ‍್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ಅವರ ಮಾರ್ಗದರ್ಶನದಲ್ಲಿ ಹೆಸ್ಕಾಂ ಶಾಖಾಧಿಕಾರಿಗಳಾದ ಪರಶುರಾಮ ಉಪ್ಪಾರ್ ಮತ್ತು ಮಂಜುನಾಥ್ ಅವರ ನೇತೃತ್ವದಲ್ಲಿ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಹೆಸ್ಕಾಂ ಗುತ್ತಿಗೆ ಸಿಬ್ಬಂದಿಗಳು ಮುತುವರ್ಜಿ ವಹಿಸಿ ದುರಸ್ತಿ ಕಾರ‍್ಯದಲ್ಲಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top