• Slide
    Slide
    Slide
    previous arrow
    next arrow
  • ನಾಟಿ ನಂಟು: ನೀರು ಕುದಿಸುವುದು ಎಂದರೇನು ? ಇಲ್ಲಿದೆ ಮಾಹಿತಿ

    300x250 AD

    ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲರೂ ಕಾದ ನೀರು, ಕುದಿಸಿದ ನೀರು, ಬಿಸಿ ನೀರು, ಕಾದಾರಿದ ನೀರು ಕುಡಿಯುವ ರೂಢಿ.

    ನೀರು ಕುದಿಸುವುದು ಎಂದರೇನು ?

    ಸ್ವಚ್ಛ ಪಾತ್ರೆಯಲ್ಲಿ ಶುದ್ಧ ಕಸ ರಹಿತ, ಮಣ್ಣುರಹಿತ ನೀರನ್ನು ಒಲೆಯ ಮೇಲೆ ಕಾಯಲು ಇಡುವುದು. ಸ್ವಲ್ಪ ನೀರು ಬಿಸಿಯಾದ ನಂತರ ಅದನ್ನ ಉಪಯೋಗಿಸಿದರೆ ಅದು ಕಾದ ನೀರು. ಇದರಿಂದ ಏನು ಪ್ರಯೋಜನ ಇಲ್ಲ ಎನ್ನಬಹುದು.

    ನೀರು ಕುದಿಯಲು ಪ್ರಾರಂಭವಾದ ನಂತರ ಕನಿಷ್ಠ 1 ನಿಮಿಷದಿಂದ ಗರಿಷ್ಠ 5 ನಿಮಿಷಗಳವರೆಗೆ ಕುದಿಯುತ್ತಲೇ ಇದ್ದು ನಂತರ ಅದನ್ನು ಉಪಯೋಗಿಸುತ್ತಾರೆ. ಅದಕ್ಕೆ ಕುದಿಸಿದ ನೀರು ಎನ್ನಬಹುದು. ಇದು ಉಪಯೋಗಕ್ಕೆ ಯೋಗ್ಯ. ಇದು ಸಂಗ್ರಹಿಸಿ ಇಟ್ಟು ಆನಂತರದಲ್ಲಿಯೂ ಉಪಯೋಗಿಸಬಹುದು ಆಗ ಅದಕ್ಕೆ ಕಾದಾರಿದ ನೀರು ಹೇಳಬಹುದು. ಸಂಗ್ರಹಿಸಿದ ಪಾತ್ರೆಯನ್ನು ಮುಚ್ಚಿಡುವುದು ಮರೆಯುವುದು ಬೇಡ.

    300x250 AD

    ಇನ್ನು ಕೆಲವರು ಬಿಸಿ ಬಿಸಿ ನೀರು ಇರುವಾಗಲೇ ಕುಡಿಯುವ ರೂಢಿ ಇದೆ. ಆದರೆ ಅದರ ಉಷ್ಣಾಂಶ ಹೆಚ್ಚಾಯಿತು ಅಂತ ಅದಕ್ಕೆ ತಣ್ಣೀರು ಸೇರಿಸಿ ಕುಡಿಯುತ್ತಾರೆ ಆಗಲೂ ಕೂಡ ಇದರದ ಪ್ರಯೋಜನ ಇಲ್ಲದಂತೆ ಆಗುವುದು.

    ಏನೇ ಇರಲಿ ಇವತ್ತಿನ ಪರಿಸ್ಥಿತಿಗೆ ನೀರು ಬಿಸಿಬಿಸಿಯಾಗಿರುವಾಗಲೇ ಕುಡಿಯುವುದು ಸೂಕ್ತ.

    – ಡಾ ರವಿಕಿರಣ್ ಪಟವರ್ಧನ್, ಶಿರಸಿ

    Share This
    300x250 AD
    300x250 AD
    300x250 AD
    Leaderboard Ad
    Back to top