ಶಿರಸಿ : ಸ್ಥಳೀಯ ಪ್ರಜ್ವಲ ಟ್ರಸ್ಟ್ (ರಿ) ಶಿರಸಿ ಇವರಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಅಗ್ನಿಪಥ್’ ವಿಷಯವನ್ನು ಮೂಲ ವಸ್ತುವನ್ನಾಗಿಸಿಕೊಂಡು ಇಂದಿನ ಯುವ ಪೀಳಿಗೆಗೆ ಅನುಕೂಲವಾಗುವಂತೆ ದೇಶ ಸೇವೆಯ ನಾನಾ ಮಜಲುಗಳ ಬಗ್ಗೆ ವಿಸ್ತಾರವಾಗಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಬೆಂಗಳೆ ಓಣಿಕೆರೆ ನೆಹರೂ ಪ್ರೌಢ ಶಾಲೆಯಲ್ಲಿ 9 ಹಾಗೂ 10 ನೇ ತರಗತಿಯ ಮಕ್ಕಳಿಗೆ ‘ಅಗ್ನಿಪಥ್’ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏಪರ್ಡಿಸಲಾಗಿತ್ತು.ಆ. 17, ಬುಧವಾರದಂದು ಬಹುಮಾನ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮವು ನಡೆಯಿತು.
ನಿರ್ಣಾಯಕರಾದ ಮಾಜಿ ಸೈನಿಕ ವಿನಾಯಕ ಧೀರನ್ ಅವರು ‘ಅಗ್ನಿಪಥ್’ ಯೋಜನೆ , ಹಾಗೂ ದೇಶ ಸೇವೆಯ ಹಲವಾರು ಮಜಲುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಅಲ್ಲದೆ ಸಾಧಕ ಬಾಧಕಗಳ ಬಗ್ಗೆ ಸಂವಾದ ಕೂಡ ನಡೆಸಲಾಯಿತು. ಬಹುಮಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪ್ರಾಯೋಜಕತ್ವವನ್ನು ಶ್ರೀ ಲಕ್ಷ್ಮಿ ಚಾರಿಟೇಬಲ್ ನ ಶ್ರೀಮತಿ ಮಂಗಲಾ ನಾಯ್ಕ ಅವರು ವಹಿಸಿದ್ದರು. 9 ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಪಟಗಾರ ಪ್ರಥಮ, ಕುಮಾರ ಸಚಿನ್ ಕೆರಿಯಾ ಗೌಡ ದ್ವಿತೀಯ, ಗಣೇಶ ರಾಮಚಂದ್ರ ಕಬ್ಬೇರ ತೃತೀಯ ಸ್ಥಾನವವನ್ನು, ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಾದ ದಿವ್ಯಾ ಮಂಜುನಾಥ ಗದ್ವಾಲ, ಚೈತ್ರಾ ಆರ್. ಕಬ್ಬೇರ, ರಜತ್ ಆರ್. ನಾಯ್ಕ, ಕುಮಾರೇಶ್ವರ ಅ.ನಾಯ್ಕ, ವೈಷ್ಣವಿ ಶೂಲ್ಯ ಮಡಿವಾಳ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.
ಸ್ಥಳೀಯ ಪಂಚಾಯತ ಅಧ್ಯಕ್ಷ ಪ್ರಸನ್ನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ವಿಜೇತರಿಗೆ ಶುಭಕೋರಿ ಅಗ್ನಿಪಥ್ ಒಂದು ಮಹತ್ತರ ಯೋಜನೆ, ಅದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಸ್ಥಳೀಯರೂ, ಟ್ರಸ್ಟಿನ ಗೌರವ ಸದಸ್ಯರೂ ಆದ ವೆಂಕಟೇಶ ಹೆಗಡೆ ಬೆಂಗಳೆ ಸ್ವಾಗತಿಸಿದರು. ಅಧ್ಯಕ್ಷೆ ಶ್ರೀಮತಿ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪದಾಧಿಕಾರಿಗಳಾದ ರಘು ನಾಯ್ಕ ವಂದನಾರ್ಪಣೆ ಮಾಡಿದರು. ಕಾರ್ಯದರ್ಶಿ ಸುಮಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಕಾವ್ಯಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕರಾದ ರಾಜಪ್ಪ ಎಚ್. ಅವರು ಹಾಗೂ ಎಲ್ಲ ಶಿಕ್ಷಕ, ಶಿಕ್ಷಕೇತರರು ಹಾಗೂ ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಚಂದಗಾಣಿಸಿಕೊಟ್ಟರು.