ಭಟ್ಕಳ: ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಟ್ಕಳ ಸಂಪೂರ್ಣ ಜಲಾವೃತವಾಗಿದೆ. ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದ ರಭಸಕ್ಕೆ ಮನೆಯೊಂದು ಸಂಪೂರ್ಣ ನೆಲಸಮವಾಗಿತ್ತು. ಅವಶೇಷಗಳ ಅಡಿ ನಾಲ್ವರು ಸಿಲುಕಿಕೊಂಡಿದ್ದು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ತೆರವು ಕಾರ್ಯಾಚರಣೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿದೆ. ಸ್ಥಳದಲ್ಲಿ ನೂರಾರು ಜನರು, ಅಧಿಕಾರಿಗಳು ಸೇರಿದ್ದಾರೆ.
ಮನೆ ಮೇಲೆ ಗುಡ್ಡ ಕುಸಿತ; ಮಣ್ಣಿನಡಿಯಲ್ಲಿದ್ದ ನಾಲ್ವರ ಶವ ಹೊರಕ್ಕೆ
