ಶಿರಸಿ: ಉ.ಕ. ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಹಾಗೂ ಲಯನ್ಸ್ ಕ್ಲಬ್, ಶಿರಸಿ ಸಹಯೋಗದೊಂದಿಗೆ 79ನೇ ಸ್ವಾತಂತ್ಯೋತ್ಸವದ ನಿಮಿತ್ತ, ಯೋಧರಿಗೆ ಹಾಗೂ ಸ್ವಾತಂತ್ರ ಹೋರಾಟಗಾರರಿಗೆ ಗೌರವಾರ್ಪಣೆ ಹಾಗೂ ಪ್ರೌಢಶಾಲಾ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ, ದೇಶದ ಕುರಿತು ಪ್ರಶ್ನಾವಳಿ ಸ್ಪರ್ಧೆ “ದೇಶಭಕ್ತಿ ಸಂಚಲನ” ಕಾರ್ಯಕ್ರಮವನ್ನು ಆ.9, ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ನಗರದ ಲಯನ್ಸ್ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 17 ನಗರಸಭೆ ಕಾಂಪ್ಲೆಕ್ಸ್, ಶಿವಾಜಿ ಚೌಕ, ಶಿರಸಿ,Tel:+919880179177, Tel:+919379051919,Tel:+917483382074 ಸಂಪರ್ಕಿಸಲು ಕೋರಲಾಗಿದೆ.
ಸ್ಪರ್ಧೆಯ ನಿಯಮಗಳು:
- ಎಲ್ಲಾ ಪ್ರಶ್ನೆಗಳು ಭಾರತ ದೇಶಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿರುತ್ತದೆ.
- ಎಲ್ಲಾ ರೀತಿಯ ಇಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳನ್ನು ಹಾಗೂ ನಕಲು ಚೀಟಿಗಳನ್ನು ಪರೀಕ್ಷಾ ಕೊಠಡಿಯ ಒಳಗೆ ನಿಷೇಧಿಸಲಾಗಿದೆ.
- ಪ್ರಶ್ನೆ ಪತ್ರಿಕೆಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಇರುತ್ತದೆ. ಪರೀಕ್ಷೆ 90 ನಿಮಿಷದ್ದಾಗಿರುತ್ತದೆ.
- ಪ್ರಶ್ನೆಗಳು ಒಟ್ಟೂ 100 ಅಂಕಗಳದ್ದಾಗಿದ್ದೂ, ಬಹು ಆಯ್ಕೆಯ ಪ್ರಶ್ನೆಗಳಾಗಿರುತ್ತದೆ.
ವಿಶೇಷ ಸೂಚನೆಗಳು
- ಸ್ಪರ್ಧೆಗಳು ಪ್ರೌಢಶಾಲಾ ಹಾಗೂ ಪಿ.ಯು.ಸಿ. ಎಂಬ ಪ್ರತ್ಯೇಕವಾದ ಎರಡು ವಿಭಾಗಗಳಲ್ಲಿ ನಡೆಯುತ್ತದೆ.
- ಭಾಗವಹಿಸುವ ಸ್ಪರ್ಧಿಗಳು ತಮ್ಮ ಶಾಲಾ- ಕಾಲೇಜುಗಳಿಂದ ಧೃಡೀಕರಣ ಪತ್ರ ಹಾಗೂ ಆಧಾರ್ ಪ್ರತಿಯೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
- ಪರೀಕ್ಷೆ ಬರೆಯಲು ಬೇಕಾಗುವ ಸಾಮಗ್ರಿಗಳನ್ನು ನೀವೇ ತರತಕ್ಕದ್ದು.
- ಸ್ಪರ್ಧಿಗಳು ತಮ್ಮದೇ ಸ್ವಂತ ಖರ್ಚಿನಿಂದ ಸ್ಪರ್ಧೆಗೆ ಬರತಕ್ಕದ್ದು, ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.
- ಹೆಸರನ್ನು ನೊಂದಾಯಿಸಲು 1 ಆಗಸ್ಟ್, 2025 ಕೊನೆಯ ದಿನಾಂಕವಾಗಿರುತ್ತದೆ.