• Slide
  Slide
  Slide
  previous arrow
  next arrow
 • ಧಾರಾಕಾರ ಮಳೆ: ಕಾನಸೂರು ಮಾದ್ನಕಳ್ ರಸ್ತೆ ಸಂಪರ್ಕ ಕಡಿತ

  300x250 AD

  ಶಿರಸಿ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣದಿಂದ ಸಿದ್ದಾಪುರ ತಾಲೂಕಿನ ಕಾನಸೂರು ಮಾದ್ನಕಳ್ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತ ಗೊಂಡಿದೆ.

  ಈ ಹಿಂದೆ ಇದ್ದ ಸೇತುವೆ ಕೆಡವಿ ಹೊಸ ಸೇತುವೆಯನ್ನು ನಿರ್ಮಾಣಮಾಡಲಾಗುತ್ತಿದೆ.ಆದರೆ ಹೊಸ ಸೇತುವೆ ನಿರ್ಮಾಣ ಕಾರ್ಯ ಮುಗಿಯದ ಕಾರಣ ಬದಲಿ ವ್ಯವಸ್ಥೆ ಯನ್ನು ಮಾಡಲಾಗಿತ್ತು.

  300x250 AD

  ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಘನಾಶಿನಿ ನದಿ ಮೈದುಂಬಿ ಹರಿಯುತ್ತಿದ್ದು ಬದಲಿ ಮಾರ್ಗ ವೂ ಜಲಾವೃತ ವಾಗಿದೆ.ಇದರಿಂದ ಮಾದ್ನಕಳ್,ದೇವಿಸರ, ಗಿರಗಡ್ಡೆ ಸೇರಿ ಹಲವು ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top